ನೀವು ಎಂದಾದರೂ ಬಸ್ಸಿನಲ್ಲಿ ಪ್ರಯಾಣಿಸಿದ್ದರೆ ಈ ಘಟನೆಯನ್ನು ನೀವು ಗಮನಿಸಿರಬಹುದು. ಪ್ರಯಾಣಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಸ್ಸಿನಲ್ಲಿ ಇಳಿಯಲು ಬಯಸುತ್ತಾರೆ. ಆದರೆ ಚಾಲಕರು ಕೆಲವೊಮ್ಮೆ ಪ್ರಯಾಣಿಕರಿಗೆ ಅನುವು ಮಾಡಿಕೊಡುವುದಿಲ್ಲ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದೆ. ಈ ಘಟನೆ ಪುಣೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. PMPALನ ಬಸ್ ಚಿಂಚವಾಡದಿಂದ ಬಾಳೆವಾಡಿಗೆ ಹೋಗುತ್ತಿತ್ತು. ಅದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಬಸ್ ನಿಲುಗಡೆಗೆ ಮೊದಲು ಇಳಿಯಬೇಕಾಗಿತ್ತು. ಚಾಲಕನ ಬಳಿ ವಿನಂತಿಸಿಕೊಂಡಾಗ ಚಾಲಕ ನಿರಾಕರಿಸಿದ್ದಾನೆ. ಹೀಗಾಗಿ ಹಠಕ್ಕೆ ಬಿದ್ದ ಆ ವ್ಯಕ್ತಿ ಮರಾಠಿಯಲ್ಲಿ “ನನ್ನನ್ನು ಉಳಿಸಿ, ನನ್ನನ್ನು ಉಳಿಸಿ, ಚಾಲಕ ನನ್ನನ್ನು ಅಪಹರಿಸುತ್ತಿದ್ದಾನೆ, ಅವನು ನನ್ನನ್ನು ಬಸ್ಸಿನಿಂದ ಇಳಿಯಲು ಬಿಡುತ್ತಿಲ್ಲ” ಎಂದು ಕಿರುಚಾಡಲು ಆರಂಭಿಸಿದ್ದಾನೆ. ಇಬ್ಬರ ನಡುವೆ ಚರ್ಚೆ ಶುರುವಾಗುತ್ತದೆ. ತನ್ನ ಮಾತನ್ನ ಕೇಳದ್ದಕ್ಕೆ ಆ ವ್ಯಕ್ತಿ ಇದ್ದಕ್ಕಿದ್ದಂತೆ ನನ್ನನ್ನು ಉಳಿಸಿ ಎಂದು ಜೋರಾಗಿ ಕೂಗಲು ಪ್ರಾರಂಭಿಸುತ್ತಾನೆ. ಪ್ರಯಾಣಿಕನ ಕಿರುಚಾಟ ನೋಡಿದ ಜನರು ಸುತ್ತಮುತ್ತ ಜನ ಗುಂಪು ಸೇರಿದ್ರು.