Select Your Language

Notifications

webdunia
webdunia
webdunia
webdunia

ಪಾಲಿಕೆ ಕಚೇರಿಯಲ್ಲಿ ಹಾಯಾಗಿ ಕುಳಿತು ಟೀವಿ ವೀಕ್ಷಿಸುತ್ತಿದ್ದ ಸಿಬ್ಬಂದಿ

ಪಾಲಿಕೆ ಕಚೇರಿಯಲ್ಲಿ ಹಾಯಾಗಿ ಕುಳಿತು ಟೀವಿ ವೀಕ್ಷಿಸುತ್ತಿದ್ದ  ಸಿಬ್ಬಂದಿ
ಬೆಂಗಳೂರು: , ಸೋಮವಾರ, 1 ಫೆಬ್ರವರಿ 2016 (15:37 IST)
ಬಿಬಿಎಂಪಿ ದಕ್ಷಿಣ ವಲಯ ಪಾಲಿಕೆ ಕಚೇರಿಯಲ್ಲಿ ಆಡಳಿತ ಸ್ಥಾಯಿ ಸಮಿತಿಯ ಸಿಬ್ಬಂದಿ ಅಧ್ಯಕ್ಷ ರಾಜಣ್ಣ ನೇತೃತ್ವದಲ್ಲಿ ದಾಳಿ ಮಾಡಿದಾಗ ಕಚೇರಿಯಲ್ಲಿ ಸಿಬ್ಬಂದಿ  ಹಾಯಾಗಿ ಕುಳಿತುಕೊಂಡು ಟಿವಿಯಲ್ಲಿ ಬರುತ್ತಿದ್ದ ಸಂಗೀತವನ್ನು ಆಲಿಸುತ್ತಾ ಕಾಲಕಳೆಯುತ್ತಿದ್ದರು.  

ಸಮಿತಿಯ ಸದಸ್ಯರು ಕಚೇರಿ ಸಿಬ್ಬಂದಿಯ ಹಾಜರಾತಿ ಪುಸ್ತಕಗಳನ್ನು ತಪಾಸಣೆ ಮಾಡಿದಾಗ ಸರಿಯಾಗಿ ನಿರ್ವಹಿಸದೇ ಇರುವುದು ಕಂಡುಬಂತು. ಬೆಳಿಗ್ಗೆ 11.25 ಗಂಟೆಯಾಗಿದ್ದರೂ ಕಚೇರಿಗೆ ಇಬ್ಬರು ಅಧಿಕಾರಿಗಳು ಆಗಮಿಸಿರಲಿಲ್ಲ.

ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಕಳೆದ ಮೂರು ತಿಂಗಳಿಂದ ನೀಡಿರಲಿಲ್ಲ. ಲೆಕ್ಕ ವಿಭಾಗವನ್ನೂ ಸರಿಯಾಗಿ ನಿರ್ವಹಿಸದಿರುವುದು ಕಂಡುಬಂತು. ಇದರಿಂದ ವಿಭಾಗದ ಅಧಿಕಾರಿ ವಿರುದ್ಧ ಸ್ಥಾಯಿ ಸಮಿತಿ ಸಿಬ್ಬಂದಿ ಗರಂ ಆಗಿದ್ದು, ಈ ವಿಷಯವಾಗಿ ತರಾಟೆಗೆ ತೆಗೆದುಕೊಂಡರೆಂದು ಗೊತ್ತಾಗಿದೆ.
 

Share this Story:

Follow Webdunia kannada