ಈ ಸರ್ಕಾರ ನಿಮ್ಮಪ್ಪಂದಲ್ಲ ಎಂದಿದ್ದ ಪ್ರದೀಪ್‌ ಈಶ್ವರ್‌ಗೆ ಅದೇ ವೇದಿಕೆಯಲ್ಲಿದ್ದ ಪಿ.ಸಿ. ಮೋಹನ್‌ ಸವಾಲು

Sampriya
ಭಾನುವಾರ, 16 ಮಾರ್ಚ್ 2025 (11:04 IST)
Photo Courtesy X
ಬೆಂಗಳೂರು: ಇದು ಸಿದ್ದರಾಮಯ್ಯ ಸರ್ಕಾರ ನಿಮ್ಮಪ್ಪಂದಲ್ಲ ಎಂಬ ಶಾಸಕ ಪ್ರದೀಪ್‌ ಈಶ್ವರ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಪಿ.ಸಿ. ಮೋಹನ್, ಅದು ಅವರ ಸಂಸ್ಕಾರ, ಆ ಬಗ್ಗೆ ನಾವೇನು ಹೇಳೋದಕ್ಕೆ ಆಗುವುದಿಲ್ಲ ಎಂದು ಟಾಂಗ್‌ ನೀಡಿದ್ದಾರೆ.

ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರ 299ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದರು. ತಾವು ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದಾಗ ಕೆಲ ಬಿಜೆಪಿ ಕಾರ್ಯಕರ್ತರು ಆಕ್ಷೇಪ ಎತ್ತಿದ್ದರು. ಹೀಗಾಗಿ, ಇದು ಸಿದ್ದರಾಮಯ್ಯ ಸರ್ಕಾರ ನಿಮ್ಮಪ್ಪಂದಲ್ಲ ಎಂಬ ಹೇಳಿಕೆ ನೀಡಿದ್ದಾಗಿ ಪ್ರದೀಪ್ ಸ್ಪಷ್ಟನೆ ನೀಡಿದ್ದಾರೆ.

ಅದೇ ಕಾರ್ಯಕ್ರಮದಲ್ಲಿ ಪ್ರದೀಪ್‌ ಜೊತೆ ವೇದಿಕೆ ಹಂಚಿಕೊಂಡಿದ್ದ ಪಿ.ಸಿ. ಮೋಹನ್‌ ಪ್ರತಿಕ್ರಿಯಿಸಿದ್ದು, ಪ್ರದೀಪ್ ಈಶ್ವರ್ ಅವರನ್ನು ರೊಚ್ಚಿಗೆಬ್ಬಿಸಿಲ್ಲ. ಅದೊಂದು ಸಮುದಾಯದ ಸರ್ಕಾರಿ ಕಾರ್ಯಕ್ರಮವಾಗಿತ್ತು. ಸರ್ಕಾರದಿಂದ ನನ್ನ ಹೆಸರೂ ಹಾಕಿದ್ದರು. ನಾನೂ ಹೋಗಿ ಭಾಗವಹಿಸಿದ್ದೆ. ಸಮುದಾಯದ ಕುರಿತು ಸಭಿಕರು ನನಗೂ ಮನವಿ ಸಲ್ಲಿಸಿ, ಬೇಡಿಕೆಗಳನ್ನು ಕೇಳಿದರು ಅದರಲ್ಲಿ ತಪ್ಪೇನಿದೆ? ಜನರು ಕೇಳಿದ್ದನ್ನು, ಹೇಳಿದ್ದನ್ನೆಲ್ಲಾ ಆವೇಶದಿಂದ ತೆಗೆದುಕೊಳ್ಳಬಾರದು. ಆ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರದಿಂದ ಮೋಸವಾಗಿದೆ. ಆ ಬಗ್ಗೆ ಸಮುದಾಯಕ್ಕೆ ಆಕ್ರೋಶವಿದೆ ಎಂದರು.

ಮೊದಲ ಬಾರಿ ಪ್ರದೀಪ್ ಶಾಸಕರಾಗಿದ್ದಾರೆ. ಈಗ ಸಮುದಾಯಕ್ಕೆ ಅಭಿವೃದ್ಧಿ ಮಂಡಳಿ ಮಾಡಿದ್ದೇವೆ. ಅದಕ್ಕೆ ಬರಬೇಕಿರುವ 300 ಕೋಟಿ ಅನುದಾನವನ್ನು ತರಲಿ, ಅಧ್ಯಕ್ಷರನ್ನು ನೇಮಕ ಮಾಡಲಿ. ಜೊತೆಗೆ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ಠೇವಣಿ ಇಡಲು ಪ್ರಯತ್ನಿಸಲಿ ಎಂದು ಮೋಹನ್ ಸವಾಲು ಹಾಕಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಕೀಯದಲ್ಲಿ ಹೊಸ ಇನಿಂಗ್ಸ್‌ ಆರಂಭಿಸಲು ಸಜ್ಜಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್

ಮಾನವಿಯತೆಯೇ ಇಲ್ಲ, ಬೈಕ್ ಸವಾರನಿಗೆ ಕಾರಿನಿಂದ ಢಿಕ್ಕಿ ಹೊಡೆದು ಕೊಂದ ದಂಪತಿ: ವಿಡಿಯೋ

ಸಿದ್ದರಾಮಯ್ಯನವರೇ ನೀವು ಕರ್ನಾಟಕಕ್ಕೆ ಸಿಎಂ, ವಯನಾಡಿನ ವಕ್ತಾರರಲ್ಲ: ಆರ್ ಅಶೋಕ್ ವಾಗ್ದಾಳಿ

ಸೈಡ್ ಇಫೆಕ್ಟ್ ಇರುವ ಔಷಧಿ ತೆಗೆದುಕೊಳ್ಳಬಾರದೇ, ಡಾ ಸಿಎನ್ ಮಂಜುನಾಥ್ ಟಿಪ್ಸ್

Gold price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments