Select Your Language

Notifications

webdunia
webdunia
webdunia
webdunia

ಪ್ರತಿಪಕ್ಷಗಳು ಸಹಕರಿಸದಿದ್ದರೆ ಕಲಾಪ ಮೊಟಕು: ಸಿಎಂ ಸಿದ್ದರಾಮಯ್ಯ

ಪ್ರತಿಪಕ್ಷಗಳು ಸಹಕರಿಸದಿದ್ದರೆ ಕಲಾಪ ಮೊಟಕು: ಸಿಎಂ ಸಿದ್ದರಾಮಯ್ಯ
ಮೈಸೂರು , ಸೋಮವಾರ, 18 ಜುಲೈ 2016 (10:28 IST)
ಪ್ರತಿಪಕ್ಷಗಳು ಸಹಕಾರ ನೀಡದಿದ್ದರೆ ವಿಧಾನಸಭೆ ಅಧಿವೇಶನ ಮೊಟಕುಗೊಳಿಸುವುದು ಅನಿವಾರ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
 
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜುಲೈ 30 ರವರೆಗೂ ಕಲಾಪ ನಡೆಸಲು ತೀರ್ಮಾನಲಾಗಿದೆ. ಸಭಾಧ್ಯಕ್ಷರು ಮನವಿ ಮಾಡಿಕೊಂಡರು ಪ್ರತಿಪಕ್ಷಗಳು ಧರಣಿ ಕೈಬಿಡಲು ಒಪ್ಪುತ್ತಿಲ್ಲ. ಪ್ರತಿಪಕ್ಷಗಳು ಸಹಕಾರ ನೀಡದಿದ್ದರೆ ವಿಧಾನಸಭೆ ಅಧಿವೇಶನ ಮೊಟಕುಗೊಳಿಸುವುದು ಅನಿವಾರ್ಯ ಎಂದು ತಿಳಿಸಿದರು.
 
ರಾಜ್ಯದ ಅಭಿವೃದ್ಧಿ ಕುರಿತು ಚರ್ಚೆ ನಡೆಸಲು ಕಲಾಪ ಕರೆಯಲಾಗಿದೆ. ಸದನ ನಡೆಸಲು ನಮ್ಮ ಸರಕಾರ ಸಿದ್ಧವಿದೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್‌ನವರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
 
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಸದನದಲ್ಲಿ ಅಸಂಬದ್ಧವಾಗಿ ಮಾತನಾಡಿ, ಸರಕಾರವನ್ನು ಕೊಲೆಗಡುಕ ಸರಕಾರ ಎಂದು ಆರೋಪ ಮಾಡಿದ್ದರ ಹಿನ್ನೆಲೆಯಲ್ಲಿ ಅವರನ್ನು ಸದನದಿಂದ ಹೊರ ಕಳುಹಿಸುವಂತೆ ಸಭಾಪತಿ ಅವರಲ್ಲಿ ಕೇಳಿಕೊಂಡೆ. ಕಲಾಪಕ್ಕೆ ಅಡ್ಡಿಪಡಿಸುವವರನ್ನು ಹೊರಗೆ ಹಾಕುವ ಅಧಿಕಾರ ಸಭಾಪತಿಗೆ ಇದೆ ಎಂದು ಹೇಳಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

2013ರಲ್ಲಿ ರೇಪ್ ಎಸಗಿದ ಐವರಿಂದ ಅದೇ ಯುವತಿಯ ಮೇಲೆ ಮತ್ತೆ ರೇಪ್