ಕೆಲಸದಾಳಿನಿಂದ ಶೂಲೇಸ್ ಕಟ್ಟಿಕೊಂಡ ಸಿಎಂ ಸಿದ್ದರಾಮಯ್ಯ

Webdunia
ಭಾನುವಾರ, 25 ಡಿಸೆಂಬರ್ 2016 (16:25 IST)
ಸ್ವಂಘೋಷಿತ ಅಹಿಂದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದಂತಾಗಿದ್ದು, ತಮ್ಮ ಶೂ ಲೇಸ್‌ನ್ನು ಮನೆ ಕೆಲಸದಾತನ ಬಳಿ ಕಟ್ಟಿಸಿಕೊಂಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.  
 
ಮೈಸೂರಿನಲ್ಲಿ ಹಿರಿಯ ನಟ ಚೇತನ್ ರಾಮ್ ರಾವ್ ನಿಧನದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅಂತಿಮ ದರ್ಶನ ಪಡೆಯಲು ತೆರಳಿದ್ದರು. ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಹೊರಗೆ ಬಂದ ಸಿಎಂ ಶೂ ಲೇಸ್‌ನ್ನು ತಮ್ಮ ಮನೆ ಕೆಲಸದಾತನ ಕೈಯಿಂದ ಕಟ್ಟಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. 
 
ಸಾರ್ವಜನಿಕವಾಗಿಯೇ ಶೂ ಲೇಸ್ ಕಟ್ಟಿಸಿಕೊಳ್ಳುತ್ತಿರುವ ಸಿಎಂ ಮಾತ್ರ ಯಾವುದೇ ಪ್ರತಿಕ್ರಿಯಿ ನೀಡದೆ ಅಧಿಕಾರದ ದರ್ಪದಲ್ಲಿಯೇ ನಿಂತಿದ್ದರು. 
 
ಸಾರ್ವಜನಿಕವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಸದಾತನ ಬಳಿ ಶೂ ಲೇಸ್ ಕಟ್ಟಿಸಿಕೊಳ್ಳುತ್ತಿದದ್ದು ಸರಿಯಾಗಿ ಕಾಣಿಸುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಘಟನೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮತ್ತೊಂದು ಮುಖ ಅನಾವರಣಗೊಂಡಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. 
 
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು, ಸಿದ್ದರಾಮಯ್ಯ ಅವರಿಗೆ ಶೂ ಹಾಕಿದ್ದು ಸರಕಾರಿ ಅಧಿಕಾರಿಯಲ್ಲ. ಅವರು ಸಿಎಂ ಸಂಬಂಧಿ ಎಂದು ಸ್ಪಷ್ಟನೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೀಸಲಾತಿ ಪರಿಗಣಿಸಿ, ಖಾಲಿ ಹುದ್ದೆ ಭರ್ತಿ ಮಾಡಿ: ರಾಜ್ಯ ಸರ್ಕಾರಕ್ಕೆ ಬಿವೈ ವಿಜಯೇಂದ್ರ ಒತ್ತಾಯ

ಓಮನ್‌ನಲ್ಲಿ ತೈಲ ಟ್ಯಾಂಕರ್‌ಗೆ ಇರಾನ್ ಕ್ಷಿಪಣಿ ಡಿಕ್ಕಿ ಬಳಿಕ ರಾಜಸ್ಥಾನದ ವ್ಯಕ್ತಿ ನಾಪತ್ತೆ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಬೆಂಗಳೂರಿನಿಂದ ಹೊರಡಬೇಕಿದ್ದ 34 ವಿಮಾನಗಳು ರದ್ಧು

ಖಮೇನಿ ಹತ್ಯೆ ಖಂಡಿಸುವವರ ಬಗ್ಗೆ ಪರಮೇಶ್ವರ್‌ ಹೀಗಂದ್ರು

ಮನೆಯಲ್ಲಿ ತಾಯಿ ಒಬ್ಬರೆ ಇದ್ದಾಗ ದಾವಣಗೆರೆ ಜಿಲ್ಲಾಧಿಕಾರಿ ಮನೆಗೆ ಬಾಂಬ್ ಬೆದರಿಕೆ

ಮುಂದಿನ ಸುದ್ದಿ
Show comments