ಮ್ಯಾನೇಜರ್ ಗೆ ಶಾಸಕನಿಂದ ಓಪನ್ ಧಮ್ಕಿ

Webdunia
ಮಂಗಳವಾರ, 2 ಅಕ್ಟೋಬರ್ 2018 (18:04 IST)
ನನ್ನ ಮಾತು ಕೇಳದಿದ್ದರೆ ನೀನೇನೂ ಕೀಳೋಕೆ ಇಲ್ಲಿರ್ತಿಯಾ ಮೊಮ್ಮಗನೆ? ಹೀಗಂತ ಮ್ಯಾನೇಜರ್ ಒಬ್ಬರಿಗೆ ಶಾಸಕ ಓಪನ್ ಆಗಿ ಧಮ್ಕಿ ಹಾಕಿದ ಘಟನೆ ನಡೆದಿದೆ.

ಸಾರಿಗೆ ಇಲಾಖೆ ಡಿಪೊ ಮ್ಯಾನೇಜರ್ ಗೆ ರಾಯಭಾಗ ಶಾಸಕರಿಂದ ಓಪನ್  ಧಮ್ಕಿ ಹಾಕಿದ ಘಟನೆ ನಡೆದಿದೆ.
ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ರಾಯಭಾಗ ಕೇಂದ್ರ ಬಸ್ ನಿಲ್ದಾಣದಲ್ಲಿ ಮ್ಯಾನೇಜರ್ ನನ್ನು ಅವಾಚ್ಯ ಶಬ್ದಗಳಿಂದ ತರಾಟೆಗೆ ತೆಗೆದುಕೊಂಡರು.

ನೀವು ಹಣ ತಿನ್ನಲಿ, ಬಿಡಲಿ. ನೀವು ಹಣ ತಿಂದಿದ್ದೀರಿ ಅಂತ ಡಿಸಿಗೆ ನಾನು ಕಂಪ್ಲೆಂಟ್ ಕೊಡ್ತಿನಿ ಎಂದು ರಾಯಭಾಗ ಶಾಸಕ‌ ದುರ್ಯೋಧನ ಐಹೊಳೆಯಿಂದ ಡಿಪೊ ಮ್ಯಾನೇಜರ್ಗೆ ಓಪನ್ ಆವಾಜ್ ಹಾಕಲಾಗಿದೆ.
ಜನರ ನಡುವೆ ಡಿಪೋ ಮ್ಯಾನೇಜರ್ ಎ. ಆರ್. ಚಬ್ಬಿ ಅವರನ್ನು ಶಾಸಕ ದುರ್ಯೋಧನ ಹೊಡೆಯಲೆತ್ನಿಸಿದ ಘಟನೆಯೂ ನಡೆಯಿತು.

ದುರ್ಯೋಧನ ಅವತಾರ ಕಂಡು ಸಾರಿಗೆ ಇಲಾಖೆ ಅಧಿಕಾರಿಗಳು ತಬ್ಬಿಬ್ಬುಗೊಂಡರು. ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ತೆರವುಗೊಳಿಸದೆ ಇದ್ದದ್ದಕ್ಕೆ ಶಾಸಕರ ಪಿತ್ತ ನೆತ್ತಿಗೆ ಏರಲು ಕಾರಣವಾಗಿತ್ತು. ನಾವು ಹೊಯ್ಕೊಂಡು ಕಸ ಹೊಡೆಯಲ್ಲಿಕ್ಕೆ ಬಂದರೆ ನೀವು ಆರಾಮಾಗಿ ಬನ್ನಿ ಅಂತ ಆವಾಜ್ ಹಾಕಿದರು. ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯೋಗ್ಯ ವ್ಯಕ್ತಿ ಮೇಲ್ಮನೆಗೆ ಆಯ್ಕೆಯಾಗಲಿ: ವಿಜಯೇಂದ್ರ

ಅಂಬುಲೆನ್ಸ್ ದಾರಿ ಮಾಡಿಕೊಡದೆ ಪುಂಡಾಟ ಮೆರೆದ ಅಪ್ರಾಪ್ತರಿಗೆ ಕಾನೂನು ಸಂಕಷ್ಟ

ಸಮೋಸಾ ಪ್ರೇಮಿ ಲೋಕೋ ಪೈಲೆಟ್: ಬಿಸಿ ಬಿಸಿ ಸಮೋಸಾಗಿ ರೈಲನ್ನೇ ನಿಲ್ಲಿಸಿದ್ರು, ಇದೇನು ಲೋಕಲ್ ಬಸ್ಸಾ ಎಂದ ಜನ Video

ಬರುಯಿಪುರ್ 11 ರ ಬಾಲಕಿ ರೇಪ್, ಮರ್ಡರ್: ನನ್ನ ಮಗ ಆದ್ರೆ ಏನು, ರೇಪ್ ಮಾಡಿದಕ್ಕೆ ಹಾಗೇ ಆಗ್ಬೇಕು ಎಂದ ತಾಯಿ Video

ಪಶ್ಚಿಮ ಬಂಗಾಲದಲ್ಲಿ 11 ರ ಬಾಲಕಿ ರೇಪ್ ಮಾಡಿ ಕೊಲೆಗೈದ ಪಾಪಿಯ ಎನ್ಕೌಂಟರ್ ಮಾಡಿ ಬಿಸಾಕಿದ ಪೊಲೀಸರು

ಮುಂದಿನ ಸುದ್ದಿ
Show comments