ಭೀಮಾನಾಯ್ಕ್ ವಿರುದ್ಧ ಮತ್ತೊಂದು ದೂರು ದಾಖಲು

Webdunia
ಮಂಗಳವಾರ, 13 ಡಿಸೆಂಬರ್ 2016 (15:23 IST)
ಬೆಂಗಳೂರಿನ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾನಾಯ್ಕ್ ವಿರುದ್ಧ ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣದ ದೂರು ದಾಖಲಾಗಿದೆ. 
ಭೀಮಾನಾಯ್ಕ್ ಕಾರು ಚಾಲಕ ರಮೇಶ್ ಸ್ನೇಹಿತನಾಗಿರುವ ಸುರೇಶ್ ಎಂಬುವವರು ಅಪಹರಣದ ದೂರು ದಾಖಲಿಸಿದ್ದಾರೆ.
 
ಸುರೇಶ್‌ಗೆ ಸ್ನೇಹಿತ ರಮೇಶ್ ಕಡೆಯಿಂದ ವಿಶೇಷ ಭೂಸ್ವಾಧೀನಾಧಿಕಾರಿ ಭೀಮಾನಾಯ್ಕ್ ಪರಿಚಯವಾಗಿತ್ತು. ತಮ್ಮ ಬಳಿ ಇದ್ದ ಕಪ್ಪು ಹಣವನ್ನು ಕಮಿಷನ್ ಲೆಕ್ಕದಲ್ಲಿ ಹೊಸ ನೋಟುಗಳಿಗೆ ಬದಲಾಯಿಸಿಕೊಡುವಂತೆ ಭೀಮಾನಾಯ್ಕ್ ಕೋರಿದ್ದರು. ಇದಕ್ಕಾಗಿ ಸುರೇಶ್, ನಾರಾಯಣ ಹಾಗೂ ದೀಪು ಎನ್ನುವವರನ್ನು ಸಂಪರ್ಕಿಸಿದ್ದರು ಎಂದು ಹೇಳಲಾಗುತ್ತಿದೆ. 
 
ಆದರೆ, ಕಮಿಷನ್ ವ್ಯವಹಾರದಲ್ಲಿ ವ್ಯತ್ಯಾಸದಿಂದಾಗಿ ಡೀಲ್ ಕುದರಿರಲಿಲ್ಲ. ಈ ವೇಳೆ 8 ಲಕ್ಷಕ್ಕೂ ಅಧಿಕ ಹಣ ನಾಪತ್ತೆಯಾಗಿತ್ತು. ಇದರಿಂದ ಸಿಟ್ಟಿಗೆದ್ದ ಭೀಮಾನಾಯ್ಕ್ ತಮ್ಮ ಸಂಗಡಿಗರಿಂದ ನಮ್ಮನ್ನು ಅಪಹರಿಸಿ ಹಲ್ಲೆ ನಡೆಸಿದ್ದರು ಎಂದು ರಮೇಶ್ ಸ್ನೇಹಿತ ಸುರೇಶ್ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಂಧನ ಭೀತಿಯಿಂದ ತಲೆಮರೆಸಿಕೊಂಡ್ರಾ ಶಾಸಕ ಬೈರತಿ ಬಸವರಾಜ್

ನಿಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ನಾಳೆ ಪಲ್ಸ್ ಪೋಲಿಯೋ ಹಾಕಿಸಿ

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದು ಗಾಂಧಿ ಕುಟುಂಬ: ಡಿಕೆ ಶಿವಕುಮಾರ್ ಗುಣಗಾನ

ಧ್ವೇಷ ಭಾಷಣದ ಮೊದಲನೇ ಅಪರಾಧಿಯೇ ಪ್ರಿಯಾಂಕ್ ಖರ್ಗೆ: ಗೋವಿಂದ ಕಾರಜೋಳ

ಮಿಸ್ಟರ್ ಕ್ಲೀನ್ ಕೃಷ್ಣಭೈರೇಗೌಡ ಹಗರಣ ಆರೋಪಕ್ಕೆ ಇವರೇ ಕಾರಣವಂತೆ : ಆರ್ ಅಶೋಕ್ ಗಂಭೀರ ಆರೋಪ

ಮುಂದಿನ ಸುದ್ದಿ
Show comments