ಅಂತಹದ್ದೇನು ಇದರಲ್ಲಿ ವಿಶೇಷ ಅಂತ ನಿಮಗೆ ಅನ್ನಿಸಬಹುದು, ಕೇಳಿ ಹಾಗಾದರೆ ಈ ಎತ್ತಿನ ಬೆಲೆ ಸಾವಿರವಲ್ಲ, ಲಕ್ಷವಲ್ಲ ಸುಮಾರು 1 ಕೋಟಿ ರೂಪಾಯಿ ಮೌಲ್ಯದಾಗಿದೆ ಎಂದು ಅದರ ಒಡೆಯ ಹೇಳಿದ್ದಾರೆ. ಆ ಎತ್ತಿನ ಒಡೆಯರಾದ ಬೋರೇಗೌಡ ಈ ಎತ್ತು 'ಹಳ್ಳಿಕಾರ್' ಎಂಬ ತಳಿಗೆ ಸೇರಿದ್ದು, ಇದನ್ನು "ಎಲ್ಲಾ ಜಾನುವಾರು ತಳಿಗಳ ತಾಯಿ" ಎಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು. ಈ ವಿಶೇಷ ತಳಿಯ ಎತ್ತಿನ ವೀರ್ಯವು "ಹೆಚ್ಚಿನ ಬೇಡಿಕೆ" ಯಲ್ಲಿದೆ ಮತ್ತು ಅದರ ಒಂದು ಡೋಸ್ ಅನ್ನು 1,000 ರೂಪಾಯಿಗೆ ಮಾರಾಟ ಮಾಡಲಾಗುವುದು ತುಮಕೂರಿನಿಂದ (Tumakuru) ಬಂದಿದ್ದ ವಿಶೇಷ ತಳಿಯ ಮೇಕೆ ಎಲ್ಲರ ಚಿತ್ತವನ್ನ ತನ್ನತ್ತ ಸೆಳೆದುಕೊಂಡಿತ್ತು. ಕೃಷಿ ಮೇಳಕ್ಕೆ ಬಂದವರೆಲ್ಲ ಮೇಕೆ ಬೆಲೆ ಕೇಳಿ ಆಶ್ಚರ್ಯ ವ್ಯಕ್ತಪಡಿಸಿ, ವಿಶೇಷ ತಳಿಯ ಮಾಹಿತಿ ಪಡೆದುಕೊಂಡರು. ಚಿಕ್ಕನಾಯಕನಹಳ್ಳಿ ಬಳಿಯ ತರಬೇನಹಳ್ಳಿ ಗ್ರಾಮದ ರೈತ ಈ ವಿಶೇಷ ತಳಿಯ ಮೇಕೆಗಳನ್ನು ಕೃಷಿ ಮೇಳಕ್ಕೆ ತಂದಿದ್ದರು. ಈ ಬೋಯರ್ ತಳಿಯ ಮೇಕೆಗಳು ಅತ್ಯಂತ ವೇಗವಾಗಿ ಬೆಳವಣಿಗೆ ಆಗುತ್ತವೆ ಮತ್ತು ಅಷ್ಟೇ ಬೇಗ ಸಂತಾನೋತ್ಪತ್ತಿಗೆ ಸಜ್ಜಾಗುತ್ತವೆ. ಕೆಲ ವರ್ಷಗಳ ಹಿಂದೆ ಉಮೇಶ್, ಮಹಾರಾಷ್ಟ್ರದ ಪುಣೆಯಿಂದ ಬೋಯರ್ ತಳಿಯ ಒಂದು ಗಂಡು ಮತ್ತು ಒಂದು ಹೆಣ್ಣು ಮೇಕೆಯನ್ನು ಎರಡೂವರೆ ಲಕ್ಷ ರೂಪಾಯಿ ನೀಡಿ ತಂದಿದ್ದರು. ಇದೀಗ ಈ ಮೇಕೆಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.