Webdunia - Bharat's app for daily news and videos

Install App

ಜನತೆಯ ಹಿತ ದೃಷ್ಟಿಯಿಂದ ಜೈಲಿಗೆ ಹೋಗಲು ಸಿದ್ಧ: ಸಿಎಂ ಇಬ್ರಾಹಿಂ

Webdunia
ಶನಿವಾರ, 1 ಅಕ್ಟೋಬರ್ 2016 (14:20 IST)
ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸುವಂತೆ ಮತ್ತೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಜನತೆಯ ಹಿತ ದೃಷ್ಟಿಯಿಂದ ನಾವು ಜೈಲಿಗೆ ಹೋಗಲು ಸಹ ಸಿದ್ಧ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಸಿಎಂ ಇಬ್ರಾಹಿಂ ಹೇಳಿದರು. 
 
ವಿಧಾನಸೌಧ ಎದುರು ಅಹೋರಾತ್ರಿ ನಿರಶನ ಕೈಗೊಂಡಿರುವ ಎಚ್‌.ಡಿ.ದೇವೇಗೌಡರನ್ನು ಭೇಟಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿಗಳು ತಮ್ಮ ಆರೋಗ್ಯ ಹಿತದೃಷ್ಟಿಯಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಕೈಬಿಡಬೇಕು ಎಂದು ಆಗ್ರಹಿಸಿ, ನಾವೆಲ್ಲ ನಿಮ್ಮ ಜೊತೆ ಸೇರಿ ಹೋರಾಟ ನಡೆಸುತ್ತೇವೆ ಎಂದು ಭರವಸೆ ನೀಡಿದರು.
 
ಒಂದು ಕಡೆ ಕಾವೇರಿ ಕಿಚ್ಚು ಹಾಗೂ ಒಂದು ಕಡೆ ಮಹದಾಯಿ ಕಿಚ್ಚು ಹೊತ್ತಿ ಉರಿಯುತ್ತಿದೆ. ಈ ಎರಡು ಜಲ ವಿವಾದದಲ್ಲಿ ಕೂಡಲೇ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದರು.
 
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡುತ್ತಿರುವ ತೀರ್ಪಿನಿಂದ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಮಳೆ ಕೊರತೆಯಿಂದ ರಾಜ್ಯ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ. ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡುವುದು ಎಷ್ಟು ಸರಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಸಿಎಂ ಇಬ್ರಾಹಿಂ ಪ್ರಶ್ನಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral Video: ಅಹ್ಮದಾಬಾದ್ ನಲ್ಲಿ ರಥಯಾತ್ರೆ ವೇಳೆ ಯದ್ವಾ ತದ್ವಾ ಓಡಿದ ಆನೆ

Arecanut price today: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿಗೆ ಬಂಪರ್

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ವಿಲ್ ಬರೆಯುವುದು ಹೇಗೆ, ಯಾಕಾಗಿ ಬರೆಯಬೇಕು ಇಲ್ಲಿದೆ ವಿವರ

ಈ ವಿಡಿಯೋ ನೋಡ್ತಿದ್ದ ಹಾಗೇ ನೀವು ಸಡನ್ ಶಾಕ್ ಆಗೋದು ಗ್ಯಾರಂಟಿ

ಮುಂದಿನ ಸುದ್ದಿ
Show comments