ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾರನ್ನು ಕೆಳಗಿಳಿಸುವ ಹಾಗೂ ಅಮೇರಿಕಾ ಅಧ್ಯಕ್ಷರಾಗುವ ಸಾಮರ್ಥ್ಯ ನಮ್ಮ ರಾಜ್ಯದ ಒಕ್ಕಲಿಗರಿಗಿದೆ. ಆದರೆ ಒಕ್ಕಲಿಗರಲ್ಲಿ ಒಗ್ಗಟ್ಟಿಲ್ಲ ಎಂಬ ಅಭಿಪ್ರಾಯವನ್ನು ನಂಜಾವಧೂತ ಸ್ವಾಮೀಜಿ ಅವರು ಇಂದು ವ್ಯಕ್ತಪಡಿಸಿದ್ದಾರೆ.
ನಗದರಲ್ಲಿ ಬಿಬಿಎಂಪಿ ವಿಭಜನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬೆಂಗಳೂರನ್ನು ಒಡೆಯಲು ಸರ್ಕಾರ ಮುಂದಾಗಿದೆ. ಸರ್ಕಾರದ ಈ ನಡವಳಿಕೆ ಸರಿಯಲ್ಲ. ಬದಲಾಗಿ ಬಿಬಿಎಂಪಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಅವ್ಯವಹಾರವನ್ನು ತಡೆಗಟ್ಟಬೇಕಿದೆ. ಇದರಲ್ಲಿ ಸಫಲರಾದರೆ ಬೆಂಗಳೂರನ್ನು ಸಿಂಗಾಪುರದಂತೆ ಮಾಡಲು ಸಾಧ್ಯವಿದೆ ಎಂದರು.
ಇದೇ ವೇಳೆ, ರಾಜ್ಯದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಿದೆ. ಒಕ್ಕಲಿಗರಿಗೆ ಅಮೆರಿಕಾ ಅಧ್ಯಕ್ಷ ಒಬಾಮಾ ಅವರನ್ನೂ ಕೆಳಗಿಳಿಸುವ ಹಾಗೂ ಅಮೇರಿಕಾದ ಅಧ್ಯಕ್ಷರಾಗುವ ಎಲ್ಲಾ ಸಾಮರ್ಥ್ಯವಿದೆ. ಆದರೆ ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಬಿಬಿಎಂಪಿಯನ್ನು ಆಡಳಿತ ದೃಷ್ಟಿಯಿಂದ ಮೂರು ಭಾಗಗಳನ್ನಾಗಿ ವಿಭಜಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವಾಮೀಜಿಗಳು ಈ ರೀತಿಯಾಗಿ ಉತ್ತರಿಸಿದ್ದಾರೆ.