Select Your Language

Notifications

webdunia
webdunia
webdunia
webdunia

ರೆಡ್ಡಿ ಪತ್ನಿಯ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಅಧಿಕಾರಿಗಳು

ರೆಡ್ಡಿ ಪತ್ನಿಯ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಅಧಿಕಾರಿಗಳು
ಬೆಂಗಳೂರು , ಬುಧವಾರ, 1 ಏಪ್ರಿಲ್ 2015 (09:38 IST)
ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ರಾಜ್ಯದ ಮಾಜಿ ಸಚಿವ, ಗಾಲಿ ಜನಾರ್ದನ ರೆಡ್ಡಿ ಹಾಗೂ ಕುಟುಂಬಸ್ಥರಿಗೆ ಸೇರಿದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ಮುಟ್ಟುಗೊಲು ಹಾಕಿಕೊಂಡಿದ್ದಾರೆ.  
 
ಏಕಾಏಕಿ ಜನಾರ್ದನ ರೆಡ್ಡಿ ಅವರ ನಿವಾಸದ ಮೇಲೆ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿರುವ  ಅಧಿಕಾರಿಗಳು, ಅವರ ಪತ್ನಿ ಅರುಣ ಲಕ್ಷ್ಮಿ ಅವರ ಹೆಸರಿನಲ್ಲಿದ್ದ 24.37 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. 
 
ಇದರೊಂದಿಗೆ ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಇಲ್ಲಿಯವರೆಗೆ ರೆಡ್ಡಿ ಅವರ ಕುಟುಂಬಕ್ಕೆ ಸೇರಿದ ಒಟ್ಟು 62.09 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಂತಾಗಿದೆ. 

Share this Story:

Follow Webdunia kannada