ಪಾಲಿಕೆಯ 17 ಇಲಾಖೆಗಳ ಪೈಕಿ, ಅತಿಹೆಚ್ಚು ಭ್ರಷ್ಟಾಚಾರ ಪ್ರಕರಣಗಳು

Webdunia
ಸೋಮವಾರ, 30 ಆಗಸ್ಟ್ 2021 (20:42 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 17 ಇಲಾಖೆಗಳ ಪೈಕಿ, ಅತಿಹೆಚ್ಚು ಭ್ರಷ್ಟಾಚಾರ ಪ್ರಕರಣಗಳು ನಡೆಯುವಂತಹ ಮತ್ತು ಅತಿಹೆಚ್ಚು ಅಕ್ರಮ ಗಳಿಕೆಗೆ ಅವಕಾಶವಿರುವಂತಹ ಪ್ರಮುಖ 04 ಇಲಾಖೆಗಳಾದ ನಗರ ಯೋಜನೆ, ರಸ್ತೆಗಳ ಮೂಲಭೂತ ಸೌಕರ್ಯ, ಬೃಹತ್ ನೀರುಗಾಲುವೆ ಮತ್ತು ಯೋಜನೆ (ಕೇಂದ್ರ) ಇಲಾಖೆಗಳಲ್ಲಿ ವಾಸ್ತವವಾಗಿ ಅವಶ್ಯಕತೆ ಇರುವ ಹುದ್ದೆಗಳಿಗಿಂತಲೂ ಸುಮಾರು 136 ಮಂದಿ ಅಧಿಕಾರಿಗಳು ಅಧಿಕವಾಗಿ ನಿಯೋಜನೆಗೊಂಡಿದ್ದಾರೆ.
ಈ ರೀತಿ ಅಧಿಕವಾಗಿರುವ 136 ಮಂದಿ ಅನವಶ್ಯಕ ಅಧಿಕಾರಿಗಳ ವೇತನಗಳು ಮತ್ತು ಇತರೆ ಸವಲತ್ತುಗಳಿಗಾಗಿ ಬಿಬಿಎಂಪಿ ಯು ಪ್ರತಿ ತಿಂಗಳು ಸುಮಾರು 03 ಕೋಟಿ ರೂ.ಗಳಂತೆ ವಾರ್ಷಿಕವಾಗಿ ಕನಿಷ್ಠ 36 ಕೋಟಿ ರೂ.ಗಳಷ್ಟು ಸಾರ್ವಜನಿಕರ ತೆರಿಗೆ ಹಣವನ್ನು ವ್ಯರ್ಥವಾಗಿ ವೆಚ್ಛ ಮಾಡಲಾಗುತ್ತಿದೆ.
 
"ವೃಂದ ಮತ್ತು ನೇಮಕಾತಿ  ನಿಯಮ" ಗಳಂತೆ ಬಿಬಿಎಂಪಿ ಗೆ ಎರವಲು ಸೇವೆ ಹೆಸರಿನಲ್ಲಿ ಕೇವಲ PWD ಇಲಾಖೆಯ ಅಧಿಕಾರಿಗಳನ್ನು ಮಾತ್ರವೇ ನಿಯೋಜನೆ ಮಾಡಬೇಕೆಂಬ ನಿಯಮಗಳಿದ್ದರೂ ಸಹ HUDCO, KPTCL, KRIDL,  KSFC, DMA, ಕೃಷಿ ಮತ್ತು ನೀರಾವರಿ ಇಲಾಖೆಗಳಿಂದಲೂ ಸಹ ಅಧಿಕಾರಿಗಳನ್ನು ನಿಯಮಬಾಹಿರವಾಗಿ ನಿಯೋಜನೆ ಮಾಡಲಾಗಿದೆ.
"ಎರವಲು ಸೇವೆ ನಿಯಮ" ಗಳನ್ನು ಗಾಳಿಗೆ ತೂರಿ 23 ಮಂದಿ ಅಧಿಕಾರಿಗಳು ತಮ್ಮ ರಾಜಕೀಯ ಪ್ರಭಾವಗಳನ್ನು / ಹಣದ ಪ್ರಭಾವಗಳನ್ನು ಬಳಸಿ ಹಲವಾರು ವರ್ಷಗಳಿಂದಲೂ ಪಾಲಿಕೆಯಲ್ಲೇ ತಳವೂರಿದ್ದಾರೆ.
ಉದಾಹರಣೆಗೆ 2006-07 ರಲ್ಲಿ ಕಾನೂನುಬಾಹಿರವಾಗಿ ಪಾಲಿಕೆಗೆ ನಿಯೋಜನೆಗೊಂಡಿರುವ HUDCO ಸಂಸ್ಥೆಯ ಅಧಿಕಾರಿಯೊಬ್ಬರು 15 ವರ್ಷಗಳಿಂದಲೂ ಬಿಬಿಎಂಪಿ ಯಲ್ಲೇ ಬೀಡು ಬಿಟ್ಟಿದ್ದಾರೆ.
ಈ ರೀತಿ, ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ, ನಿಯಮಬಾಹಿರವಾಗಿ ಪಾಲಿಕೆಗೆ ನಿಯೋಜನೆಗೊಂಡಿರುವ ಮತ್ತು ಪ್ರಮುಖ 04 ಇಲಾಖೆಗಳಲ್ಲಿ ಅವಶ್ಯಕತೆಗಿಂತಲೂ ಅಧಿಕವಾಗಿ ನಿಯೋಜನೆಗೊಂಡಿರುವ 136 ಮಂದಿ ಅನವಶ್ಯಕ ಅಧಿಕಾರಿಗಳನ್ನು ಕೂಡಲೇ ವಾಪಸ್ಸು ಕಳುಹಿಸುವ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳನ್ನು,‌ ಪಾಲಿಕೆಯ ಮುಖ್ಯ ಆಯುಕ್ತರನ್ನು ಮತ್ತು ಆಡಳಿತಾಧಿಕಾರಿಗಳನ್ನು ಆಗ್ರಹಿಸಿ ದೂರುಗಳನ್ನು ಸಲ್ಲಿಸಲಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಖಾಕಿ ಮೇಲೆ ಕೈ ಹಾಕಿದ ಮೂವರು ಮೂವರಿಗೆ 7 ವರ್ಷ ಜೈಲೇ ಗತಿ

ಸ್ಪರ್ಧಾತ್ಮಕ ಪರೀಕ್ಷೆಗೆ ಹೊರಟ್ಟಿದ್ದ ಯುವತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣು

ದೆಹಲಿ ವಾಯುಮಾಲಿನ್ಯ: ನಾಳೆ ಶಾಲೆಗೆ ರಜೆ ಘೋಷಣೆ, 50% ಮನೆಯಿಂದ ಕೆಲಸಕ್ಕೆ ಅನುಮತಿ

ರಾಜ್ಯದಲ್ಲಿ 13ಲಕ್ಷ ಕಾರ್ಡುಗಳು ಅನರ್ಹ, ಸಚಿವ ಕೆಎಚ್ ಮುನಿಯಪ್ಪ ಕೊಟ್ಟ ಸಲಹೆ ಏನು

ಗೃಹಲಕ್ಷ್ಮಿ ಮಾಹಿತಿ ಕೊಡಲು ಅಧಿಕಾರಿಗಳು ಅಂಜುತ್ತಿರುವುದೇಕೆ: ಮಹೇಶ್ ಟೆಂಗಿನಕಾಯಿ

ಮುಂದಿನ ಸುದ್ದಿ
Show comments