ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಎದುರಾಗಿದೆ ಒಂದು ಅಡ್ಡಿ

Krishnaveni K
ಬುಧವಾರ, 7 ಜನವರಿ 2026 (09:04 IST)
ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಚರ್ಚೆ ನಡೆಸಲು ಮುಂದಾಗಿರುವ ನಾಯಕರಿಗೆ ಈಗ ಒಂದು ಅಡ್ಡಿ ಎದುರಾಗಿದೆ. ಅದೇನೆಂದು ಇಲ್ಲಿದೆ ನೋಡಿ  ವಿವರ.

ಸಂಕ್ರಾಂತಿ ವೇಳೆಗೆ ರಾಜ್ಯ ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್  ಬುಲಾವ್ ನೀಡಿ ಮಾತುಕತೆ ನಡೆಸಬಹುದು ಎಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣ ಕಾಯುತ್ತಿದೆ. ಈ ಹಿಂದೆ ಹೊಸ ವರ್ಷದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿದೇಶ ಯಾತ್ರೆಯಿಂದಾಗಿ ಮಾತುಕತೆ ಮುಂದೂಡಿಕೆಯಾಗಿದೆ ಎನ್ನಲಾಗಿತ್ತು.

ಆದರೆ ಈಗ ಸೋನಿಯಾ ಗಾಂಧಿ ಭಾರತದಲ್ಲಿದ್ದರೂ ಅವರಿಗೆ ಅನಾರೋಗ್ಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಸೋನಿಯಾ ಗಾಂಧಿಗೆ ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಇದೀಗ ಅವರು ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸದ್ಯಕ್ಕೆ ಅವರು ಅನಾರೋಗ್ಯಕ್ಕೀಡಾಗಿರುವುದರಿಂದ ಮತ್ತೆ ರಾಜ್ಯ ರಾಜಕೀಯ ಚಟುವಟಿಕೆಗಳು ಮುಂದೂಡಿಕೆಯಾಗಲಿವೆ. ಸೋನಿಯಾ ಚೇತರಿಸಿಕೊಂಡ ಬಳಿಕವಷ್ಟೇ ರಾಜ್ಯದಲ್ಲಿ ಅಧಿಕಾರ ಹಂಚಿಕೆ ಅಥವಾ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಮಮಂದಿರ ಹಣ ದುರುಪಯೋಗ ಬೆನ್ನಲ್ಲೇ ಶೇ 50ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ರಾಜೀನಾಮೆ

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ನಾಪತ್ತೆ, ಹೈಕೋರ್ಟ್‌ನಿಂತ ಬಂತು ಮಹತ್ವದ ಆದೇಶ

ಕಟೀಲಿನ ಮಹಾಲಕ್ಷ್ಮಿ ಆನೆಗೆ ಮಾವುತನನ್ನು ಒಂದು ಕ್ಷಣನೂ ಬಿಟ್ಟಿರಕ್ಕಾಗಲ್ಲ ನೋಡಿ, Video

ಕಳ್ಳತನ ಮಾಡಲು ಹೋಗಿ ಈ ರೀತಿ ಸಿಕ್ಕಾಕಿಕೊಳ್ಳುವುದಾ, Video

ದಕ್ಷಿಣ ಸ್ಪೇನ್‌ನಲ್ಲಿ ಕಾಡ್ಗಿಚ್ಚಿಗೆ ಕನಿಷ್ಠ 12 ಮಂದಿ ಬಲಿ

ಮುಂದಿನ ಸುದ್ದಿ
Show comments