Select Your Language

Notifications

webdunia
webdunia
webdunia
webdunia

ಗಿರಿಜನರ ಪ್ರತಿಭಟನೆಗೆ ನೋಟು ನಿಷೇಧವೇ ಕಾರಣ: ಜಿ.ಪರಮೇಶ್ವರ್

ಗಿರಿಜನರ ಪ್ರತಿಭಟನೆಗೆ ನೋಟು ನಿಷೇಧವೇ ಕಾರಣ: ಜಿ.ಪರಮೇಶ್ವರ್
ಮೈಸೂರು , ಸೋಮವಾರ, 19 ಡಿಸೆಂಬರ್ 2016 (19:52 IST)
ಗಿರಿಜನರು ಹಾಗೂ ಆದಿವಾಸಿಗಳ ಪ್ರತಿಭಟನೆಗೆ ನೋಟು ನಿಷೇಧವೇ ಕಾರಣ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಾಂಬ್ ಸಿಡಿಸಿದ್ದಾರೆ. 
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಿರಿಜನರು ಹಾಗೂ ಆದಿವಾಸಿಗಳ ಬೆತ್ತಲೆ ಪ್ರತಿಭಟನೆ ಕುರಿತು ತನಿಖೆ ನಡೆಸಿ ನೈಜ ವರದಿ ನೀಡುವಂತೆ ಐಜಿ ಹಾಗೂ ಎಸ್‌ಪಿ ಅವರಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವ ಕುರಿತು ನಿರ್ಧರಿಸುತ್ತೇನೆ ಎಂದು ಭರವಸೆ ನೀಡಿದರು. 
 
ಕೊಡಗಿನ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಕೂಲಿ ನೀಡಲು ಮಾಲೀಕರಿಗೆ ಹಣ ಸಿಗುತ್ತಿಲ್ಲ. ಹೀಗಾಗಿ ಕಾಫಿ ಎಸ್ಟೇಟ್ ಮಾಲೀಕರು ಕೂಲಿ ಕಾರ್ಮಿಕರು ಹಾಗೂ ಆದಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಇದರಿಂದ ಕೆಲಸವಿಲ್ಲದೆ ಕಂಗಾಲಾಗಿರುವ ಗಿರಿಜನರು ಹಾಗೂ ಆದಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಚ್ಚರಿ ಮೂಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೇಟಿ ಪ್ರಕರಣ: ಸಿಐಡಿ ವರದಿ ನಂತ್ರ ಸತ್ಯ ಸಂಗತಿ ಬಹಿರಂಗ ಎಂದ ಸಚಿವ ರಾಮಲಿಂಗಾರೆಡ್ಡಿ