Select Your Language

Notifications

webdunia
webdunia
webdunia
webdunia

ನಿತ್ಯಾನಂದನಿಗೆ ಅಶ್ಲೀಲ ದೃಶ್ಯ ತೋರಿಸಿಲ್ಲ, ಹಸ್ತಮೈಥುನ ಮಾಡಿಸಿಲ್ಲ: ಡಾ. ದುರ್ಗಣ್ಣ ಸ್ಪಷ್ಟನೆ

ನಿತ್ಯಾನಂದನಿಗೆ ಅಶ್ಲೀಲ ದೃಶ್ಯ  ತೋರಿಸಿಲ್ಲ, ಹಸ್ತಮೈಥುನ ಮಾಡಿಸಿಲ್ಲ: ಡಾ. ದುರ್ಗಣ್ಣ ಸ್ಪಷ್ಟನೆ
ಬೆಂಗಳೂರು , ಸೋಮವಾರ, 15 ಸೆಪ್ಟಂಬರ್ 2014 (20:06 IST)
ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕರು ಸುದ್ದಿಗೋಷ್ಠಿ ನಡೆಸಿದ್ದು, ಸಿಐಡಿ ಅಧಿಕಾರಿಗಳಿಗೆ ನಿತ್ಯಾನಂದ ಪುರುಷತ್ವ ಪರೀಕ್ಷೆಯ ವರದಿಯನ್ನು ಸಲ್ಲಿಸಿದ್ದೇವೆ ಎಂದು ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ಡಾ. ದುರ್ಗಣ್ಣ ಹೇಳಿದ್ದಾರೆ.

ಎಲ್ಲಾ ವೈದ್ಯರ ಸಂಪೂರ್ಣ ಸಹಮತದೊಂದಿಗೆ ವರದಿ ತಯಾರಿಸಲಾಗಿದೆ. ಪರೀಕ್ಷೆ ಮಾಡಿದ ಎಲ್ಲಾ ವೈದ್ಯರು ಸಹಿ ಮಾಡಿದ್ದಾರೆ ಎಂದು ಡಾ.ದುರ್ಗಣ್ಣ ಹೇಳಿದರು.  ವೈದ್ಯರಿಗೆ ನಿತ್ಯಾನಂದ ಕಳಿಸಿರುವ ಲೀಗಲ್ ನೋಟಿಸ್ ಆಧಾರರಹಿತವಾಗಿದೆ ಎಂದು ದುರ್ಗಣ್ಣ ಹೇಳಿದರು. ತನಿಖಾಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ನುಡಿದರು.
 
ನಿತ್ಯಾನಂದನಿಗೆ ಯಾವುದೇ ಅತ್ಯಾಚಾರದ ದೃಶ್ಯ ತೋರಿಸಿಲ್ಲ. ಪರೀಕ್ಷೆ ವೇಳೆ ಹಸ್ತಮೈಥುನ ತೋರಿಸಿಲ್ಲ. ಪ್ರಚೋದನೆಗಾಗಿ ಹುಡುಗಿಯರನ್ನೂ ಬಳಸಿಲ್ಲ. ಮಾಧ್ಯಮಗಳಲ್ಲಿ ಬಂದ ಎಲ್ಲಾ ವರದಿ ಸುಳ್ಳು, ಮುಂದಿನ ಕ್ರಮ ತನಿಖಾಧಿಕಾರಿಗಳು ಕೈಗೊಳ್ಳುತ್ತಾರೆ ಎಂದು ವರದಿ ಸಲ್ಲಿಸಿದ ಬಳಿಕ ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ದುರ್ಗಣ್ಣ ಹೇಳಿದ್ದಾರೆ.

Share this Story:

Follow Webdunia kannada