ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ಧಾದ ಬಳಿಕ ಅಧಿಕೃತವಾಗಿ ಅಲ್ಲಿನ ಎಲ್ಲ ಪ್ರಕರಣಗಳೂ ಲೋಕಾಯುಕ್ತ ಅಂಗಳಕ್ಕೆ ಬಂದು ಬಿದ್ದಿವೆ. ಆದರೆ, ಲೋಕಾಯುಕ್ತದಲ್ಲಿ ಅಷ್ಟು ಪ್ರಕರಣ ನಿಭಾಯಿಸುವ ಸಿಬ್ಬಂದಿ ಸಾಮರ್ಥ್ಯ ಇಲ್ಲ.
ಎಸಿಬಿಯಲ್ಲಿದ್ದ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ವರ್ಗಾವಣೆ ಮಾಡುವಂತೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಸರ್ಕಾರಕ್ಕೆ ಬರೆದಿದ್ದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಎಸಿಬಿಯಲ್ಲಿದ್ದ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ವರ್ಗಾವಣೆ ಮಾಡುವಂತೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಸರ್ಕಾರಕ್ಕೆ ಬರೆದಿದ್ದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮತ್ತೂಂದೆಡೆ ಒಂದು ತಿಂಗಳಿನಿಂದ ಎಸಿಬಿ ಅಧಿಕಾರಿಗಳೂ ಕೆಲಸವಿಲ್ಲದೇ ಕೈ ಕಟ್ಟಿ ಕುಳಿತುಕೊಳ್ಳುವಂತಾಗಿದೆ.
ತನಿಖಾ ಹಂತದಲ್ಲಿದ್ದ 340 ಗಂಭೀರ ದಾಳಿ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದು, ಸದ್ಯ ಕಾರ್ಯ ನಿರ್ವಹಿಸುತ್ತಿರುವ 400 ಸಿಬ್ಬಂದಿ ಬಳಸಿಕೊಂಡು ಎಸಿಬಿಯಿಂದ ವರ್ಗಾವಣೆ ಆಗಿರುವ ಅಕ್ರಮ ಆಸ್ತಿಗೆ (ಡಿಸ್ ಪ್ರಪೋಷನೆಟ್ ಅಸೆಟ್) ಸಂಬಂಧಿಸಿದ 340ಕ್ಕೂ ಹೆಚ್ಚಿನ ಕೇಸ್‌ಗಳನ್ನು ತನಿಖೆ ನಡೆಸುವುದೇ ಲೋಕಾಯುಕ್ತ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ತನಿಖೆ ವಿಳಂಬವಾದಷ್ಟೂ ಸಾಕ್ಷ್ಯಾನಾಶ ಸಾಧ್ಯತೆ ಹೆಚ್ಚು ಎಂಬ ಮಾತುಗಳು ಕೇಳಿಬರುತ್ತಿವೆ.