Webdunia - Bharat's app for daily news and videos

Install App

ಜೂನ್ 16ರಂದು ಪೆಟ್ರೋಲ್ ಬಂಕ್ ಬಂದ್

Webdunia
ಭಾನುವಾರ, 11 ಜೂನ್ 2017 (10:06 IST)
ಬೆಂಗಳೂರು: ನಿತ್ಯ ತೈಲ ಬೆಲೆ ಪರಿಷ್ಕರಣೆ ಮಾಡುವ ಯೋಜನೆ ವಿರೋಧಿಸಿ ಜೂನ್‌ 16ರಂದು ರಾಜ್ಯದಾದ್ಯಂತ ಪೆಟ್ರೋಲ್‌ ಬಂಕ್‌ ಬಂದ್‌ ಮಾಡಲು ರಾಜ್ಯ ಪೆಟ್ರೋಲಿಯಂ ಡೀಲರ್ಸ್‌ ಫೆಡರೇಷನ್‌ ನಿರ್ಧರಿಸಿದೆ.
 
ಜೂನ್‌ 15ರ ಮಧ್ಯರಾತ್ರಿಯಿಂದ 16ರ ಮಧ್ಯರಾತ್ರಿವರೆಗೆ ಒಂದು ದಿನ ಸಾಂಕೇತಿಕ ಮುಷ್ಕರ ನಡೆಸಲು ಫೆಡರೇಷನ್‌ ಅಧ್ಯಕ್ಷ ಎಚ್‌.ಮಂಜಪ್ಪ ನೇತೃತ್ವದಲ್ಲಿ ನಡೆದ ತೈಲ ವರ್ತಕರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
 
ಜೂನ್‌ 16ರ ನಂತರ ದೇಶದಾದ್ಯಂತ ನಿತ್ಯ ತೈಲ ಬೆಲೆ ಪರಿಷ್ಕರಣೆ ಮಾಡುವ ಯೋಜನೆ ಜಾರಿಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಇದರಿಂದ ಪೆಟ್ರೋಲ್‌ ಬಂಕ್‌ ಮಾಲೀಕರಿಗೆ ತೊಂದರೆಯಾಗಲಿದೆ. ನಿತ್ಯವೂ ಮಧ್ಯರಾತ್ರಿ 12ಕ್ಕೆ ಮಾಲೀಕರೇ ಬಂಕ್‌ಗೆ ಬಂದು ಪರಿಷ್ಕೃತ ದರ ನಮೂದಿಸಬೇಕು. ಸ್ವಲ್ಪ ಹೆಚ್ಚುಕಡಿಮೆಯಾದರೆ 5 ಲಕ್ಷ ದಂಡ ತೆರಬೇಕಾಗುತ್ತದೆ. ಅಲ್ಲದೇ ರಾತ್ರಿ 8ಕ್ಕೆ ಮೊಬೈಲ್‌ ಅಥವಾ ವೆಬ್‌ಸೈಟ್‌ನಲ್ಲಿ ಪರಿಷ್ಕೃತ ದರ ಪ್ರಕಟಿಸುವುದಾಗಿ ಸರ್ಕಾರ ಹೇಳಿದೆ. ಆದರೆ, ಮೊಬೈಲ್‌, ಇಂಟರ್‌ನೆಟ್‌ ಸೇವೆ ಇಲ್ಲದ ಗ್ರಾಮೀಣ ಪ್ರದೇಶಗಳಿಗೆ ನಿತ್ಯವೂ ದರ ಹೇಗೆ ತಲುಪುತ್ತದೆ. ಬೆಲೆ ಹೆಚ್ಚುಕಡಿಮೆಯಾಗುತ್ತಿದ್ದರೆ ಗ್ರಾಹಕರು ಗೊಂದಲಕ್ಕೆ ಸಿಲುಕಲಿದ್ದಾರೆ ಎಂದು ತಿಳಿಸಿದ್ದಾರೆ.

 ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್ಆಡಿ 2.5 ಲಕ್ಷ ರೂಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿಲೀಗ್`ನಲ್ಲಿ ಭಾಗವಹಿಸಲು  ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

 

 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

West Bengal: ಪೋಷಕರನ್ನು ಕೊಂದು ಅನಾಥಶ್ರಮದಲ್ಲಿನ ಇಬ್ಬರು ಶಿಕ್ಷಕರನ್ನು ಕೊಂದ ವ್ಯಕ್ತಿ

Liberian ಹಡಗು ದುರಂತ: ಇದೊಂದು ವಿಪತ್ತು ಎಂದ ಕೇರಳ ಸರ್ಕಾರ

ಬೆಂಗಳೂರು ಮಳೆಯ ಅವಘಡದಿಂದ ಎಚ್ಚೆತ್ತ ಡಿಸಿಎಂ ಶಿವಕುಮಾರ್‌ರಿಂದ ದಿಟ್ಟ ನಿರ್ಧಾರ

Bantwal Abdul Rahim Case: ಬಂಧಿತರಿಂದ ಇನ್ನಷ್ಟು ಮಂದಿಯ ಹೆಸರು ಬಯಲು

ಕನಸಿನಂತೆ ಮೂರು ತಿಂಗಳ ಹಿಂದೆ ಸೇನೆ ಸೇರಿದ ಯೋಧ ಹಠಾತ್ ಹೃದಯಾಘಾತದಲ್ಲಿ ಸಾವು

ಮುಂದಿನ ಸುದ್ದಿ
Show comments