ಯಾವ ಖಾತೆ ಅಂತ ನೀವೇ ಹೇಳ್ತಾ ಇದ್ದೀರಿ,ಬದಲಾವಣೆ ಮಾಡ್ತೀರಾ ನೀವೇ ನೋಡಿ.ಆದರೆ ಸರ್ಕಾರ ಸುಸೂತ್ರವಾಗಿ ನಡೆದುಕೊಂಡು ಹೋಗಲು ಎಲ್ಲರ ಸಹಕಾರ ಅಗತ್ಯ.ಈಗ ಬ್ಯಾನ್ ಬ್ಯಾನ್ ಬ್ಯಾನ್ ಅಂತಿದ್ದಾರೆ.ತಕ್ಷಣ ಯಾವುದೇ ಸಂಸ್ಥೆಯನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ.ಏನಾದರೂ ಸಂವಿಧಾನ ನಿಯಮ ಉಲ್ಲಂಘನೆ ಮಾಡಿದರೆ ಮಾತ್ರ ಅಂತಹ ಕ್ರಮ ಆಗುತ್ತದೆ.ಕಾನೂನು ಉಲ್ಲಂಘನೆ ಮಾಡದೇ ಇದ್ದರೆ ಅಂತಹ ಪ್ರಶ್ನೆಯೇ ಬರುವುದಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.
ಇನ್ನೂ ಈ ವೇಳೆ ಸೋತಿರುವ ಎಂಎಲ್ ಸಿಗೂ ಸಚಿವ ಸ್ಥಾನ ಕೊಟ್ಟಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ್ದು.ಕೆಲವು ಪಕ್ಷದಲ್ಲಿ ಮಾನದಂಡಗಳು ಇರುತ್ತೆ.ಪಕ್ಷಕ್ಕೆ ಬೋಸ್ ರಾಜು ಅವರು 45 ವರ್ಷ ಕೆಲಸ ಮಾಡಿದ್ದಾರೆ.ಹೀಗಾಗಿ ಪಕ್ಷ ಅವರನ್ನು ಗಮನಿಸಿ ಸಚಿವ ಸ್ಥಾನ ಕೊಟ್ಟಿದ್ದಾರೆ ಎಂದು ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.