ಲಾಕ್‌ಡೌನ್, ನೈಟ್‌ ಕರ್ಫ್ಯೂನಿಂದ ಯಾವುದೇ ಪ್ರಯೋಜನ ಇಲ್ಲ: ಶಾಸಕ ರಘುಪತಿ ಭಟ್

Webdunia
ಮಂಗಳವಾರ, 4 ಜನವರಿ 2022 (17:34 IST)
ಕೋವಿಡ್‌ಗೆ ನಾವೆಲ್ಲ ಹೆದರಬೇಕಾಗಿಲ್ಲ. ಮಾರ್ಚ್ ಎಪ್ರಿಲ್‌ ವರೆಗೆ ಮಾತ್ರ ಇರುತ್ತದೆ. ಒಂದು ಮಟ್ಟಕ್ಕೆ ತಲುಪಿದ ನಂತರ ಅದರ ಸಂಖ್ಯೆ ಇಳಿಮುಖವಾಗುತ್ತದೆ. ಲಾಕ್‌ಡೌನ್‌ನಿಂದ ಒಮ್ಮೇಗೆ ಕೊರೋನ ಸಂಖ್ಯೆ ಏರಿಕೆಯಾಗುವುದನ್ನು ಕಡಿಮೆ ಮಾಡುತ್ತದೆ. ಆದರೆ ಲಾಕ್‌ಡೌನ್ ಮಾಡುವುದು ಬೇಡ ಹಾಗೂ ಆ ಬಗ್ಗೆ ನಮಗೆ ಯಾರಿಗೂ ಒಲವು ಇಲ್ಲ. ಲಾಕ್‌ಡೌನ್, ನೈಟ್ ಕರ್ಫ್ಯೂನಿಂದ ಯಾವುದೇ ಪ್ರಯೋಜನ ಕೂಡ ಇಲ್ಲ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ನಡೆದ ವಿದ್ಯಾರ್ಥಿಗಳ ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೈಟ್ ಕರ್ಫ್ಯೂ ಈಗ ಅವಶ್ಯಕತೆ ಇಲ್ಲ. ಹೊಸ ವರ್ಷ ಆಚರಣೆಯಲ್ಲಿ ಗೊಂದಲ ಆಗಬಹುದೆಂಬ ಉದ್ದೇಶದಿಂದ ನೈಟ್ ಕರ್ಫ್ಯೂ ಜಾರಿಗೆ ತರಲಾಗಿದೆ. ನೈಟ್ ಕರ್ಫ್ಯೂನಿಂದ ಕೊರೋನ ತಡೆಯುತ್ತದೆ ಎಂಬುದನ್ನು ನಾನು ಒಪ್ಪಲ್ಲ ಎಂದು ಹೇಳಿದರು.
ನೈಟ್ ಕರ್ಫ್ಯೂ ಇದ್ದರೆ ಜನರಿಗೆ ಕೊರೋನ ಈಗಲೂ ಇದೆ ಎಂಬುದು ಅರ್ಥ ಆಗುತ್ತದೆ. ಇಲ್ಲದಿದ್ದರೆ ಕೊರೋನವೇ ಇಲ್ಲ ಎಂದು ಹೇಳಿ ಮಾಸ್ಕ್ ಹಾಕದೆ, ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿರುತ್ತಾರೆ. ಜನರಿಗೆ ಎಚ್ಚರಿಕೆ ಇರಲಿ ಎಂಬ ಕಾರಣಕ್ಕೆ ತಜ್ಞರು ಇಂತಹ ಕ್ರಮಗಳ ಬಗ್ಗೆ ನಿರ್ದೇಶನ ನೀಡುತ್ತಿದ್ದಾರೆ. ನನ್ನ ಪ್ರಕಾರ ಸರಕಾರ ಮುಂದೆ ಲಾಕ್‌ ಡೌನ್ ಮಾಡಲಿಕ್ಕೆ ಇಲ್ಲ. ಕೊರೋನ ಸಂಖ್ಯೆ ತುಂಬಾ ಜಾಸ್ತಿಯಾದರೆ ಮಾಡಬಹುದು. ಆದರೆ ನನ್ನ ಅಭಿಪ್ರಾಯ ಲಾಕ್‌ ಡೌನ್ ಮಾಡುವುದು ಬೇಡ ಎಂದರು.
ಎರಡು ಡೋಸ್ ಪಡೆದ ಪ್ರಮಾಣ ಪತ್ರ ಇರುವವರು ಮಾತ್ರ ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಇದನ್ನು ಆಮಂತ್ರಣ ಪತ್ರಿಕೆಯಲ್ಲಿಯೇ ನಮೂದಿಸಲಾಗಿದೆ. ಸರಕಾರದ ನಿರ್ದೇಶನದ ಪ್ರಕಾರವೇ ಪರ್ಯಾಯ ಮಹೋತ್ಸವವನ್ನು ನಡೆಸಲಾಗುವುದು. ಈ ಪರ್ಯಾಯ ಮಹೋತ್ಸವದಲ್ಲಿ ಭಾಗವಹಿಸಲು ಮುಖ್ಯಮಂತ್ರಿಗಳು ಈಗಾಗಲೇ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾನವಿಯತೆಯೇ ಇಲ್ಲ, ಬೈಕ್ ಸವಾರನಿಗೆ ಕಾರಿನಿಂದ ಢಿಕ್ಕಿ ಹೊಡೆದು ಕೊಂದ ದಂಪತಿ: ವಿಡಿಯೋ

ಸಿದ್ದರಾಮಯ್ಯನವರೇ ನೀವು ಕರ್ನಾಟಕಕ್ಕೆ ಸಿಎಂ, ವಯನಾಡಿನ ವಕ್ತಾರರಲ್ಲ: ಆರ್ ಅಶೋಕ್ ವಾಗ್ದಾಳಿ

ಸೈಡ್ ಇಫೆಕ್ಟ್ ಇರುವ ಔಷಧಿ ತೆಗೆದುಕೊಳ್ಳಬಾರದೇ, ಡಾ ಸಿಎನ್ ಮಂಜುನಾಥ್ ಟಿಪ್ಸ್

Gold price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಮುಂದಿನ ಸುದ್ದಿ
Show comments