ನನ್ನ ಮಗಳ ಪ್ರಾಣ ತೆಗೆದವನ ಪ್ರಾಣ ತೆಗೆದುಕೊಳ್ಳದೇ ಬಿಡಲ್ಲ: ನಿರಂಜನ್ ಹಿರೇಮಠ್

Krishnaveni K
ಗುರುವಾರ, 25 ಏಪ್ರಿಲ್ 2024 (15:04 IST)
ಹುಬ್ಬಳ್ಳಿ: ಮಗಳು ನೇಹಾಳನ್ನು ಹತ್ಯೆ ಮಾಡಿದ ಫಯಾಜ್ ಬಗ್ಗೆ ಆಕ್ರೋಶ ವ್ಯಕಪಡಿಸಿರುವ ನಿರಂಜನ್ ಹಿರೇಮಠ್ ನನ್ನ ಪ್ರಾಣ ಹೋದರೂ ಆತನ ಪ್ರಾಣ ತೆಗೊಳ್ಳದೇ ಬಿಡಲ್ಲ ಎಂದಿದ್ದಾರೆ.

ನಿನ್ನೆಯಷ್ಟೇ ಸಿಐಡಿ ಆರೋಪಿ ಫಯಾಜ್ ನನ್ನು ವಶಕ್ಕೆ ಪಡೆದುಕೊಂಡು ಸ್ಥಳ ಮಹಜರು ನಡೆಸಿತ್ತು. ಸಿಐಡಿ ವಿಚಾರಣೆ ವೇಳೆ ಫಯಾಜ್ ತಾನು ಹತ್ಯೆಗಾಗಿ ನಡೆಸಿದ್ದ ಒಂದು ವಾರದ ಯೋಜನೆ ಬಗ್ಗೆ ಬಾಯ್ಬಿಟ್ಟಿದ್ದ. ಇದರ ಬಗ್ಗೆ ಈಗ ನಿರಂಜನ್ ಹಿರೇಮಠ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

‘ನನ್ನ ಮಗಳ ಶವದ ಮೇಲೆ ಶಪಥ ಮಾಡಿದ್ದೇನೆ. ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ, ಫಯಾಜ್ ಪ್ರಾಣ ತೆಗೆದುಕೊಳ್ಳುತ್ತೇನೆ. ಫಯಾಜ್ ಮಾತ್ರವಲ್ಲ, ಆತನಿಗೆ ಯಾರೋ ಬೇರೆಯವರೂ ಸಹಾಯ ಮಾಡಿದ್ದಾರೆ. ಅವರನ್ನೂ ಬಂಧಿಸಬೇಕು’ ಎಂದು ನಿರಂಜನ್ ಹಿರೇಮಠ್ ಆಗ್ರಹಿಸಿದ್ದಾರೆ.

ಹಂತಕ ಫಯಾಜ್ ಮಗಳನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದ. ಕೆಲವು ದಿನಗಳಿಂದ ನಮಗೆ ಬೆದರಿಕೆ ಇತ್ತು. ಯಾರೋ ನಮ್ಮ ಮನೆಗೆ ಬಂದು ವಿಡಿಯೋ ಮಾಡುತ್ತಿದ್ದರು. ಕೆಲವು ಅಪರಿಚಿತರು ಮನೆ ಸುತ್ತಮುತ್ತ ಓಡಾಡುತ್ತಿದ್ದಾರೆ. ಎಲ್ಲವನ್ನೂ ಸಿಐಡಿ ಗಮನಕ್ಕೆ ತಂದಿದ್ದೇನೆ ಎಂದು ನಿರಂಜನ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಮುಖ ಘಟ್ಟದಲ್ಲಿರುವ ದೆಹಲಿ ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಶಬರಿಮಲೆಯಲ್ಲಿ ಭಕ್ತರಿಗೆ ತೊಂದರೆ, ಕೇರಳ ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಂಡ ಅಣ್ಣಾಮಲೈ

ಜೆಡಿಎಸ್‌ನಲ್ಲಿಯೇ ಇರುತ್ತಿದ್ದರೆ ದೇವೇಗೌಡ, ಅವರ ಮಕ್ಕಳು ಸಿಎಂ ಆಗಕ್ಕೆ ಬಿಡ್ತಿರ್ಲಿಲ್ಲ: ಸಿದ್ದರಾಮಯ್ಯ

ದೆಹಲಿ ವಿಮಾನವೇರಿದ ಡಿಕೆಶಿ, ಶಾಸಕರನ್ನು ಇಲ್ಲೇ ಕಟ್ಟಿಹಾಕಲು ಸಿಎಂ ಮಾಸ್ಟರ್ ಪ್ಲಾನ್‌

ದೆಹಲಿ, ಶಿಕ್ಷಕರ ಇದೇ ನಡವಳಿಕೆಯಿಂದ ಮಗ ಪ್ರಾಣ ಕಳೆದುಕೊಂಡ

ಮುಂದಿನ ಸುದ್ದಿ
Show comments