ಬೆಂಗಳೂರು ಪಾರ್ಕಿಂಗ್ ಸಮಸ್ಯೆ ಬಗ್ಗೆ ವಿನೂತನ ಪ್ರಯೋಗ

Webdunia
ಮಂಗಳವಾರ, 23 ನವೆಂಬರ್ 2021 (15:19 IST)
ರಾಜ್ಯ ಸರ್ಕಾರ ಪರಿಗಣಿಸುತ್ತಿರುವ ಬೆಂಗಳೂರಿನ ಹೊಸ ಪಾರ್ಕಿಂಗ್ ನೀತಿಗಾಗಿ ಸಾರ್ವಜನಿಕ ಸಲಹೆಗಳಿಗೆ ನಗರ ಆಯುಕ್ತ ಕಮಲ್ ಪಂತ್ ಆಹ್ವಾನ ನೀಡಿದ್ದಾರೆ.
 
ರಾಜ್ಯ ಸರ್ಕಾರ ನಗರದ ಪಾರ್ಕಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಲು ಮುಂದಾಗಿದ್ದು ಬದಲಾವಣೆಗಳನ್ನು ಜಾರಿಗೆ ತರುವ ಯೋಜನೆ ಹೊಂದಿದೆ.ಬೆಂಗಳೂರು ನಗರದಲ್ಲಿ ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುವುದು ಹೇಗೆ ಎಂಬುದರ ಬಗ್ಗೆ ನೆಟ್ಟಿಗರಿಂದ ಪಂತ್ ಸಲಹೆ ಕೇಳಿದ್ದಾರೆ.
 
ನಗರದಲ್ಲಿ ಅಕ್ರಮ ಪಾರ್ಕಿಂಗ್ ಸೇರಿದಂತೆ ಪಾರ್ಕಿಂಗ್ ಸ್ಥಳಗಳಿಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿದ್ದು, ಜನತೆ ಪಾರ್ಕಿಂಗ್ ಜಾಗಗಳ ಕೊರತೆ, ಅದರಿಂದ ರಸ್ತೆಗಳಲ್ಲಿ ಉಂಟಾಗುತ್ತಿರುವ ಅಡಚಣೆ ಬಗ್ಗೆ ದೂರುತ್ತಿದ್ದಾರೆ. ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ನೀಡಲಾಗಿರುವ ಪಾರ್ಕಿಂಗ್ ನೀತಿಯನ್ನೇ ಸದ್ಯಕ್ಕೆ ಪರಿಗಣಿಸಲಾಗಿದೆ ಎಂದು ಪಂತ್ ಮಾಹಿತಿ ನೀಡಿದ್ದಾರೆ.
 
ಪಾರ್ಕಿಂಗ್ ನೀತಿ 2.0 ನ ಕರಡು ಪ್ರತಿಯನ್ನು ಡಿಯುಎಲ್ ಟಿ ನೀಡಿದ್ದು, ಸರ್ಕಾರ ಫೆಬ್ರವರಿಯಲ್ಲಿ ಅನುಮೋದನೆ ನೀಡಿತ್ತು. ಆದರೆ ಈ ನೀತಿ ಜಾರಿಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ, ನೀತಿ ಜಾರಿಯ ಬಗ್ಗೆ ಸಮಾಲೋಚನೆ ಪ್ರಗತಿಯಲ್ಲಿದೆ ಎಂದು ಪಂತ್ ತಿಳಿಸಿದ್ದಾರೆ.
 
ಈ ನೀತಿ ಜಾರಿಯಾದಲ್ಲಿ ಬೆಂಗಳೂರಿನ ಪಾರ್ಕಿಂಗ್ ಜಾಗಗಳ ಕೊರತೆಯ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ. ನಿಗದಿತ ಸ್ಥಳಗಳಲ್ಲಿ ವಾರ್ಷಿಕ ಮೊತ್ತವನ್ನು ಪಾವತಿ ಮಾಡಿ ವಾಹನ ನಿಲುಗಡೆ ನೀತಿಯ ಪ್ರಮುಖ ಅಂಶವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜವಂಶಸ್ಥ, ಸಂಸದ ಯದುವೀರ್ ಅವರ ಅಜ್ಜ ಮದನ್ ಗೋಪಾಲ್ ಇನ್ನಿಲ್ಲ

ಸಿಎಂ ಕುರ್ಚಿ ರೇಸ್‌ನಲ್ಲಿ ನೀವಿದ್ದೀರಾ ಎಂದಿದ್ದಕ್ಕೆ ಪರಮೇಶ್ವರ್ ಪ್ರತಿಕ್ರಿಯೆ ಹೀಗಿತ್ತು

ಇಟಲಿ ಟೆಂಪಲ್ ಸುತ್ತಿ ಕಪ್ಪ ಒಪ್ಪಿಸಿದರೆ ಡಿಕೆ ಶಿವಕುಮಾರ್ ಸಿಎಂ: ಆರ್ ಅಶೋಕ

ಲೋಕಾನುಭವವಿರುವ ಸಿದ್ದರಾಮಯ್ಯರಿಗೆ ಇದು ತಿಳಿದಿಲ್ವ: ತೇಜಸ್ವಿ ಸೂರ್ಯ ಪ್ರಶ್ನೆ

ಕರ್ನಾಟಕದ ಜನತೆಗೆ ಗುಡ್‌ನ್ಯೂಸ್‌, ಬೆಂಗಳೂರು ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಗ್ರೀನ್ ಸಿಗ್ನಲ್

ಮುಂದಿನ ಸುದ್ದಿ
Show comments