Select Your Language

Notifications

webdunia
webdunia
webdunia
webdunia

ಕೆ.ಜಿ.ಹಳ್ಳಿ ಪೊಲೀಸರಿಂದ ಕುಖ್ಯಾತ ಕಳ್ಳನ ಬಂಧನ

ಕೆ.ಜಿ.ಹಳ್ಳಿ ಪೊಲೀಸರಿಂದ ಕುಖ್ಯಾತ ಕಳ್ಳನ ಬಂಧನ
ಬೆಂಗಳೂರು , ಶುಕ್ರವಾರ, 4 ಸೆಪ್ಟಂಬರ್ 2015 (10:39 IST)
ಉದ್ಯಾನನಗರಿಯ ಕಾಮಾಕ್ಷಿಪಾಳ್ಯದಲ್ಲಿರುವ ಅಂಬಾ ಮಹೇಶ್ವರಿ ದೇವಸ್ಥಾನದಲ್ಲಿನ ದೇವರ ಮೇಲಿದ್ದ 250 ಗ್ರಾಂ ಚಿನ್ನವನ್ನು ಕದ್ದಿದ್ದ ಕುಖ್ಯಾತ ಕಳ್ಳನೋರ್ವನನ್ನು ನಗರದ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಇಂದು ಬಂಧಿಸಿದ್ದಾರೆ. 
 
ಬಂಧಿತ ಆರೋಪಿ ಕಳ್ಳನನ್ನು ನಾಗರಾಜ್ ಅಲಿಯಾಸ್ ಕೋಟೆ ನಾಗರಾಜ್(40) ಎಂದು ಹೇಳಲಾಗಿದ್ದು, ಬಂಧಿತನಿಂದ ಕದ್ದಿದ್ದ 250 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. 
 
ಈತ ಕಳೆದ ಆಗಸ್ಟ್ 19ರಂದು ನಗರದ ಕಾಮಾಕ್ಷಿಪಾಳ್ಯದ ಅಂಬಾ ಮಹಾಶ್ವರಿ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವ ನೆಪದಲ್ಲಿ ಗರ್ಭಗುಡಿಗೆ ನುಗ್ಗಿ 250 ಗ್ರಾಂ ಚಿನ್ನವನ್ನು ಕದ್ದಿದ್ದ. ಇದು ದೇವಸ್ಥಾನದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬಳಿಕ ದೃಶ್ಯಾವಳಿಗಳನ್ನು ಪಡೆದು ವಿಚಾರಣೆ ಆರಂಭಿಸಿದ್ದ ಪೊಲೀಸರು, ಆರೋಪಿ ಕಳ್ಳನ ಬಗ್ಗೆ ಮಾಹಿತಿ ಕಲೆ ಹಾಕಿ ಇಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 
ಈತ ಕೇವಲ ದೇವಸ್ಥಾನಗಳಲ್ಲಿಯೇ ರಾಜ್ಯದ 200ಕ್ಕೂ ಅಧಿಕ ಕಡೆ ಕಳ್ಳತನ ನಡೆಸಿದ್ದು, ಸಾಕಷ್ಟು ಬಂಗಾರವನ್ನು ಲೂಟಿ ಮಾಡಿದ್ದಾನೆ. ಈ ಕೃತ್ಯಕ್ಕೆ ಉಡುಪಿಯ ಶ್ರೀಕೃಷ್ಣ ದೇವಾಲಯ ಹಾಗೂ ಮೈಸೂರಿನ ಚಾಮುಂಡಿ ದೇವಾಲಯಗಳೂ ಕೂಡ ಒಳಗಾಗಿವೆ ತುತ್ತಾಗಿದ್ದು, ದೇವಸ್ಥಾನಗಳಲ್ಲಿ ಕಳ್ಳತನ ಮಾಡುವುದೇ ಈತನ ಕಾಯಕವಾಗಿತ್ತು. ಈತನ ವಿರುದ್ಧ ರಾಜ್ಯದ ವಿವಿಧೆಡೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

Share this Story:

Follow Webdunia kannada