Webdunia - Bharat's app for daily news and videos

Install App

ಜನರೇ ಇಲ್ಲದ' ದಾಲ್‌ ಸರೋವರಕ್ಕೆ ಕೈಬೀಸಿದ ಪ್ರಧಾನಿ ಮೋದಿ: ಸಾಮಾಜಿಕ ತಾಣದಾದ್ಯಂತ ವ್ಯಂಗ್ಯ

Webdunia
ಭಾನುವಾರ, 9 ಜನವರಿ 2022 (20:21 IST)
ಭಾರೀ ಭದ್ರತೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ರವಿವಾರ ಶ್ರೀನಗರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಮೊಬೈಲ್‌ ಸಂಪರ್ಕವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು ಮತ್ತು ಇಂಟರ್ನೆಟ್‌ ಸೇವೆಯೂ ಅಲಭ್ಯವಾಗಿತ್ತು. ಇದೇ ವೇಳೆ ಪ್ರಧಾನಿ ಹಲವು ಯೋಜನೆಗಳನ್ನು ಉದ್ಘಾಟಿಸುವ ನಿಮಿತ್ತ ಮೋದಿ ಜಮ್ಮು, ಶ್ರೀನಗರ ಮತ್ತು ಲೇಹ್‌ ಗೂ ಭೇಟಿ ನೀಡಿದ್ದರು. ಜನಪ್ರಿಯ ದಾಲ್‌ ಸರೋವರಕ್ಕೂ ತೆರಳಿದ್ದರು. 
ದಾಲ್‌ ಸರೋವರದಲ್ಲಿ ಬೋಟ್‌ ನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ಜನರಿಗೆ ಕೈಬೀಸುತ್ತಿರುವ ವೀಡಿಯೊವನ್ನು ಬಿಜೆಪಿಯ ಅಧಿಕೃತ ಖಾತೆಯಲ್ಲಿ ಪ್ರಕಟಿಸಲಾಗಿತ್ತು. ಆದರೆ, ಜನರೇ ಇಲ್ಲದ ಸರೋವರಕ್ಕೆ ಕೈ ಬೀಸಿದ ಪ್ರಧಾನಿಯ ವೀಡಿಯೋ ಕುರಿತು ವ್ಯಾಪಕ ವ್ಯಂಗ್ಯ ವ್ಯಕ್ತವಾಗಿದೆ.
ವೀಡಿಯೊ ಪ್ರಕಾರ ಪ್ರಧಾನಿ ಮೋದಿ ಯಾರಿಗೂ ಕೈಬೀಸುತ್ತಿರುವವಂತೆ ಕಾಣಿಸುತ್ತಿದೆ. ಆದರೆ ಯಾರಿಗೆ ಕೈ ಬೀಸುತ್ತಿದ್ದಾರೆ ಎನ್ನುವುದು ಅಲ್ಲಿ ʼಯಾರೂ ಇರದಿದ್ದʼ ಕಾರಣ ವ್ಯಕ್ತವಾಗಿಲ್ಲ. ಈ ಬಗ್ಗೆ ಕಾಶ್ಮೀರಿಗಳು, "ಇಷ್ಟೊಂದು ಭದ್ರತಾ ವ್ಯವಸ್ಥೆಯಿರುವ ಕಾರಣ ಅಲ್ಲಿ ಯಾರೂ ಇರಲು ಸಾಧ್ಯವೇ ಇಲ್ಲ. ಅದರ ಜೊತೆಗೆ ದಾಲ್‌ ಸರೋವರವು ತುಂಬಾ ವಿಸ್ತಾರವಾಗಿದೆ. ಆದ್ದರಿಂದ ಪ್ರಧಾನಿ ಯಾರಿಗೆ ಕೈಬೀಸುತ್ತಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದ್ವಿಚಕ್ರ ವಾಹನ ಸವಾರರಿಗೆ ಯೋಗಿ ಸರ್ಕಾರ ಶಾಕ್‌: ಇನ್ನು ಮುಂದೆ ಹೆಲ್ಮೆಟ್‌ ಧರಿಸದಿದ್ದರೆ ಪೆಟ್ರೋಲ್‌ ಸಿಗಲ್ಲ

ಹೈಕಮಾಂಡ್‌ ಮೆಚ್ಚಿಸಲು ಡಿಕೆ ಶಿವಕುಮಾರ್‌ ಹೀಗೇ ನಡೆದುಕೊಳ್ಳುತ್ತಿದ್ದಾರೆ: ಶೋಭಾ ಕರಂದ್ಲಾಜೆ

ಡಿಕೆ ಶಿವಕುಮಾರ್ ಹಾಗೇ ಹೇಳಬಾರದಿತ್ತು: ಮಲ್ಲಿಕಾರ್ಜುನ ಖರ್ಗೆ

ಭೀಕರ ಪ್ರವಾಹಕ್ಕೆ ತುತ್ತಾದ ಜಮ್ಮು ಪ್ರದೇಶದಿಂದ 5000 ಸಾವಿರ ಮಂದಿ ಸ್ಥಳಾಂತರ

ಎಸ್‌ಐಟಿ ಶೋಧದ ವೇಳೆ ಮಹೇಶ್ ಶೆಟ್ಟಿ ಮನೆಯಲ್ಲಿ ಸಿಕ್ತು ಊಹಿಸಲಾಗದ ವಸ್ತು

ಮುಂದಿನ ಸುದ್ದಿ
Show comments