Select Your Language

Notifications

webdunia
webdunia
webdunia
webdunia

ನಮ್ಮ ಮೆಟ್ರೋ: ಹಿಂದಿ ಭಾಷೆ ಪರ ಶಾಸಕ ಸಿ.ಟಿ.ರವಿ ಬ್ಯಾಟಿಂಗ್

ನಮ್ಮ ಮೆಟ್ರೋ: ಹಿಂದಿ ಭಾಷೆ ಪರ ಶಾಸಕ ಸಿ.ಟಿ.ರವಿ ಬ್ಯಾಟಿಂಗ್
ಚಿಕ್ಕಮಗಳೂರು , ಗುರುವಾರ, 22 ಜೂನ್ 2017 (14:25 IST)
ಹಿಂದಿ ಭಾಷೆ ರಾಷ್ಟ್ರಭಾಷೆಯಾಗಿರುವುದರಿಂದ ನಮ್ಮ ಮೆಟ್ರೋದಲ್ಲಿ ಹಿಂದಿ ಭಾಷೆ ಬಳಕೆ ಸೂಕ್ತವಾಗಿದೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
 
ತ್ರಿಭಾಷಾ ಸೂತ್ರದಂತೆ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳ ಬಳಕೆಯಾಗಬೇಕು. ರಾಷ್ಟ್ರಭಾಷೆಯಾದ ಹಿಂದಿಯಿಂದ ಪ್ರಾದೇಶಿಕ ಭಾಷೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಆದರೆ ಆಂಗ್ಲ ಭಾಷೆ ಕನ್ನಡ ಭಾಷೆಗೆ ಕುತ್ತಾಗಿದೆ ಎಂದು ತಿಳಿಸಿದ್ದಾರೆ.
 
ನಾವು ಯಾವುದೇ ಭಾಷೆಯ ದ್ವೇಷಿಗಳಲ್ಲ. ಎಲ್ಲಾ ಭಾಷೆಗಳಿಗೆ ಆದ್ಯತೆ ನೀಡುತ್ತೇವೆ. ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
 
ನಮ್ಮ ಮೆಟ್ರೋ ನಾಮಫಲಕಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಬಳಸುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೊಬ್ಬ ಬಿಜೆಪಿ ಶಾಸಕ ಶ್ರೀರಾಮುಲು ಕೂಡಾ ಹಿಂದಿ ಭಾಷೆ ಪರವಾಗಿ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈಲ್ವೆ ಟಿಕೆಟ್ ದರಗಳಲ್ಲಿ ಹೆಚ್ಚಳವಾಗುವ ಸಾಧ್ಯತೆ