ಶಿವಮೊಗ್ಗದ ರಾಗಿಗುಡ್ಡ -ಶಾಂತಿನಗರ ಕಲ್ಲು ತೂರಾಟ ಮತ್ತು ಮನೆಗಳ ಮೇಲಿನ ದಾಳಿಯಲ್ಲಿ 7 ನಿಷೇಧಿತ ಪಿಎಫ್ಐ ಕಾರ್ಯಕರ್ತರು ಭಾಗವಹಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಈಗಾಗಲೇ ಬಂಧನಕ್ಕೆ ಒಳಗಾಗಿರು, ವಶಕ್ಕೆ ಪಡೆಯಲಾಗಿರುವ ಕಿಡಿಗೇಡಿಗಳು ವಿಚಾರಣೆ ವೇಲೆ ಬಾಯಿಬಿಟ್ಟಿದ್ದಾರೆ ಎನ್ನಲಾಗಿದ್ದು, ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.ಮುಬಾರಕ್, ಇಮ್ರಾನ್, ನಬೀ ಅಲಿಯಾಸ್ ಡಿಚ್ಚಿ, ಅಬ್ಸಲ್, ಅನ್ವರ್, ಹಿದಾಯತ್ ಮತ್ತು ಇರ್ಫಾನ್ ಎಂಬ ನಿಷೇಧಿತ ಪಿಎಫ್ಐ ಕಾರ್ಯಕರ್ತರು ಗಲಾಟೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಪೊಲೀಸರು ಎಚ್ಚೆತ್ತುಕೊಳ್ಳುತ್ತಿದ್ದಂತೆಯೇ ಅವರೆಲ್ಲ ನಾಪತ್ತೆ ಆಗಿದ್ದಾರೆ ಎನ್ನಲಾಗಿದೆ.