Select Your Language

Notifications

webdunia
webdunia
webdunia
webdunia

ನಾಡಹಬ್ಬ ದಸರಾಗೆ ಇಂದು ವಿದ್ಯುಕ್ತ ಚಾಲನೆ: ಹಲವು ಗಣ್ಯರು ಭಾಗಿ

ನಾಡಹಬ್ಬ ದಸರಾಗೆ ಇಂದು ವಿದ್ಯುಕ್ತ ಚಾಲನೆ: ಹಲವು ಗಣ್ಯರು ಭಾಗಿ
ಮೈಸೂರು , ಮಂಗಳವಾರ, 13 ಅಕ್ಟೋಬರ್ 2015 (10:22 IST)
2015ನೇ ಸಾಲಿನ ನಾಡಹಬ್ಬ ದಸರಾಗೆ ಇಂದು ಪ್ರಗತಿಪರ ರೈತ ಪುಟ್ಟಯ್ಯ ಅವರು ದೇವಿ ಚಾಮುಂಡಿಗೆ ಪೂಜೆ ಸಲ್ಲಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. 
 
ಬೆಳಗ್ಗೆ 11.5ರಿಂದ 11.55ರ ನಡುವಿನ ಧನುರ್ ಲಗ್ನದಲ್ಲಿ ಚಾಲನೆ ನೀಡಲಾಗುತ್ತಿದ್ದು, ಪ್ರಥಮ ದಿನವಾದ ಇಂದು ದಸರಾಗೆ ಚಾಲನೆ ನೀಡುತ್ತಿರುವ ಹಿನ್ನೆಲೆಯಲ್ಲಿ ಉದ್ಘಾಟನಾ ಸಮಾರಂಭದ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಅಲ್ಲದೆ ಸರಳವಾಗಿ ಸಿಂಗರಿಸಲಾಗಿದ್ದು, ವಿಶೇಷ ವ್ಯಕ್ತಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾಮಾನ್ಯರಿಗೆಲ್ಲರಿಗೂ ಕೂಡ ಆಸನ ವ್ಯವಸ್ಥೆ ಮಾಡಲಾಗಿದೆ. ಇವರಿಗಾಗಿ ಒಟ್ಟು 200 ಆಸನಗಳನ್ನು ಅಳವಡಿಸಲಾಗಿದೆ. 
 
ಉದ್ಘಾಟನೆ ವೇಳೆ ರಾಣಿ ಪ್ರಮೋದಾದೇವಿ, ಉತ್ತರಾಧಿಕಾರಿ ಯದುವೀರ್ ಕೃಷ್ಣದತ್ತ ಒಡೆಯರ್, ಸಿಎಂ ಸಿದ್ದರಾಮಯ್ಯ ಮತ್ತು ಇತರೆ ಸಂಪುಟ ಸಚಿವರು ಉಪಸ್ಥಿತಿ ವಹಿಸಲಿದ್ದಾರೆ. ಉದ್ಘಾಟನೆಯ ಬಳಿಕ ಮಹಿಷಾಸುರ ಮರ್ದಿನಿ ಮತ್ತು ಉತ್ಸವ ಮೂರ್ತಿ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಗುತ್ತದೆ. 
 
ಇನ್ನು ವಿಶ್ವ ವಿಖ್ಯಾತಿಯಾಗಿರುವ ದಸರಾ ಉತ್ಸವಕ್ಕೆ ಸಾವಿರಾರು ಜನ ಭಾಗವಹಿಸುವ ಹಿನ್ನೆಲೆಯಲ್ಲಿ ಪೊಲೀಸರನ್ನು ನಿಯೋಜಿಸುವ ಮೂಲಕ ಸೂಕ್ತ ಭದ್ರತೆ ಕಾಯ್ದುಕೊಳ್ಳಲಾಗಿದ್ದು, ಶ್ವಾನ ದಳ, ಬಾಂಬ್ ನಿಷ್ಕ್ರಿಯ ಸಿಬ್ಬಂದಿ ಸೇರಿದಂತೆ ಇತತರು ಹದ್ದಿನ ಖಣ್ಣನ್ನು ಇರಿಸಿದ್ದಾರೆ. ಉದ್ಘಾಟನೆಯ ಬಳಿಕ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಪ್ರಸಾದ ವಿತರಣೆಯೂ ನಡೆಯಲಿದೆ.  

Share this Story:

Follow Webdunia kannada