ಮೈಸೂರು ವಿಶ್ವವಿದ್ಯಾಲಯದ ಪರಿಸರ ಅಧ್ಯಯನ ವಿಭಾಗದ ಕೆಲ ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ, ಫೋನ್ ನಂಬರ್`ಗಳು ಅಶ್ಲೀಲ ವೆಬ್ ಸೈಟ್`ನಲ್ಲಿ ಕಾಣಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ವಿಭಾಗದ ಜೈಕುಮಾರ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.
ಪ.ರಿಸರ ಅಧ್ಯಯನ ವಿಭಾಗದ ಟಾಪರ್ ವಿದ್ಯಾರ್ಥಿ ಅಂತಿಮ ಸೆಮಿಸ್ಟರ್`ನ ಜೈಕುಮಾರ್ ತಾನೇ ಈ ಕೃತ್ಯ ಎಸಗಿದ್ದಾಗಿ ಜಯಲಕ್ಷ್ಮೀಪುರಂ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಪ್ರಾಧ್ಯಾಪಕರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.
ಜೈಕುಮಾರ್ ಈ ಕೃತ್ಯ ಎಸಗಲು ಏನು ಕಾರಣ? ವಿದ್ಯಾರ್ಥಿನಿಯರ ಮೇಲೆ ಆತನಿಗಿದ್ದ ಕೋಪವೇನು? ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ವಿದ್ಯಾರ್ಥಿನಿಯರಿಗೆ ಅನಾಮಧೇಯರು ಕರೆ ಮಾಡಿ ಅಶ್ಲೀಲ ಭಾಷೆಯಲ್ಲಿ ಮಾತನಾಡುತ್ತಿದ್ದರು. ಇದರಿಂದ ನೊಂದ ವಿದ್ಯಾರ್ಥಿನಿಯರು ಮುಖ್ಯಸ್ಥರನ್ನ ಸಂಪರ್ಕಿಸಿ ಈ ಬಗ್ಗೆ ತಿಳಿಸಿದ್ದರು. ಬಳಿಕ ಪರಿಶೀಲನೆ ನಡೆಸಿದಾಗ ಅಶ್ಲೀಲ ವೆಬ್ ಸೈಟ್`ನಲ್ಲಿ ವಿದ್ಯಾರ್ಥಿನಿಯರ ಫೋಟೋ, ಫೋನ್ ನಂಬರ್`ಗಳು ಅಪ್ಲೋಡ್ ಆಗಿರುವುದು ಬೆಳಕಿಗೆ ಬಂದಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ