Select Your Language

Notifications

webdunia
webdunia
webdunia
webdunia

ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ: ರವಿ ತಾಯಿ ಹೇಳಿಕೆ

ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ: ರವಿ ತಾಯಿ ಹೇಳಿಕೆ
ತುಮಕೂರು , ಬುಧವಾರ, 18 ಮಾರ್ಚ್ 2015 (11:23 IST)
ಕಳೆದ ಸೋಮವಾರ ನಿಗೂಢವಾಗಿ ಸಾವನ್ನಪ್ಪಿದ್ದ ದಕ್ಷ, ಹಿರಿಯ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಾವಿಗೆ ಸಂಬಂಧಿಸಿದಂತೆ ಅವರ ತಾಯಿ ಪ್ರತಿಕ್ರಿಯಿಸಿದ್ದು, ನನ್ನ ಮಗ ಹೇಡಿಯಲ್ಲ, ಆತ್ಮಹತ್ಯೆ ಮಾಡಿಕೊಂಡಿಲ್ಲ. ಅದು ಕೊಲೆ ಎಂದು ನೇರವಾಗಿ ಆರೋಪಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಅವನೊಂದಿಗೆ ಕಳೆದ ಒಂದು ವಾರದ ಹಿಂದೆ ಸುಮಾರು 12 ಗಂಟೆ ವೇಳೆಯಲ್ಲಿ ಮಾತನಾಡಿದ್ದೆ. ಆಗ ನನ್ನ ಕುಶಲೋಪರಿ ವಿಚಾರಿಸಿದ್ದ. ಅಲ್ಲದೆ ನಾನೂ ಕೂಡ ಊರಿಗೆ ಬರುವಂತೆ ಆಹ್ವಾನಿಸಿದ್ದೆ. ಆದರೆ ಸಮಯಾವಕಾಶ ಸಿಕ್ಕಾಗ ಬರುವುದಾಗಿ ತಿಳಿಸಿದ್ದ. ದಿನಕ್ಕೆ 2 ಬಾರಿ ಫೋನ್ ಮಾಡುತ್ತಿದ್ದ. ನನಗೆ ತಿಳಿಯುವುದಿಲ್ಲ ಎಂದು ಯಾವ ವಿಚಾರವನ್ನೂ ಹಂಚಿಕೊಳ್ಳುತ್ತಿರಲಿಲ್ಲ. ಆದರೆ ಅವರ ಅತ್ತಿಗೆಯೊಂದಿಗೆ ಮಾತನಾಡುತ್ತಿದ್ದ ಎಂದಿದ್ದಾರೆ. 
 
ಬಳಿಕ, ನಾನು ನನ್ನ ಮಗನ ಮನೆಗೆ ಹೋಗಬೇಕೆಂದೇ ಮಗಳ ಮನೆಗೆ ಹೋಗಿದ್ದೆ. ಸಿದ್ಧವಾಗುತ್ತಿರುವಾಗಲೇ ಟಿವಿಯಲ್ಲಿ ನನ್ನ ಮಗನ ಸಾವಿನ ಸುದ್ದಿ ಬರುತ್ತಿತ್ತು. ಬಳಿಕ ನನ್ನ ಸೊಸೆ ನನ್ನನ್ನು ಘಟನಾ ಸ್ಥಳಕ್ಕೆ ಕರೆದೊಯ್ದರು ಎಂದಿದ್ದಾರೆ.  
 
ಇನ್ನು ನಿಮ್ಮ ಮಗ ನಿಮ್ಮ ಸಮಸ್ಯೆಗಳ ಬಗ್ಗೆ ಏನಾದರೂ ತಿಳಿಸಿದ್ದರೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಮಗ ನನಗೆ ತಿಳಿಯುವುದಿಲ್ಲ ಎಂಬ ಕಾರಣದಿಂದ ಏನನ್ನೂ ಹೇಳುತ್ತಿರಲಿಲ್ಲ. ಆದರೆ ಅವರನನ್ನು ಒತ್ತಡ ಹೇರಿ ಕೊಲೆ ಮಾಡಿದ್ದಾರೆ. ನಮಗೆ ನ್ಯಾಯ ಸಿಗಬೇಕು. ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಯಲ್ಲ. ನಾನು ದೇಶದ ವೀರನನ್ನು ಹಡೆದಿದ್ದೆ ಎಂದಿದ್ದಾರೆ.  
 
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಅವರ ತಂದೆ ಕೂಡ ಪ್ರತಿಕ್ರಿಯಿಸಿದ್ದು, ಊರಲ್ಲಿ ಈ ಹಿಂದೆ ನಡೆದ ಜಾತ್ರೆ ಸಂದರ್ಭದಲ್ಲಿ ಮಾತ್ರ ನಾನು ಅವನೊಂದಿಗೆ ಮಾತನಾಡಿದ್ದೆ. ಆದರೆ ಅವನ ಸಾವಿಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಪ್ರಕರಣ ಬೆಳಕಿಗೆ ಬಂದಾಗ ನಾವು ಬೆಂಗಳೂರಿನಲ್ಲೇ ಇದ್ದು, ಮಗಳ ಮಗನ ಬರ್ತ್ ಡೇ ಯಲ್ಲಿ ಬಾಗವಹಿಸಿದ್ದೆವು. ಆದರೆ ನನ್ನ ಮಗನಿಗೆ ಬರ್ತ್ ಡೇ ಬಗ್ಗೆ ಮಾಹಿತಿ ಇಲ್ಲದ ಕಾರಣ ಅವನು ಭಾಗವಹಿಸಿರಲಿಲ್ಲ. ಕೊನೆಗೆ ಅಂದು ಸಂಜೆ ಪ್ರಕರಣ ಬೆಳಕಿಗೆ ಬಂತು. ಆದರೆ ನನ್ನ ಮಗ ಯಾವತ್ತೂ ತನ್ನ ಸಮಸ್ಯೆಗಳ ಬಗ್ಗೆ ಮಾತನಾಡಿದವನಲ್ಲ ಎಂದಿದ್ದಾರೆ. 
 
2009ನೇ ಸಾಲಿನ ಐಎಎಸ್ ಅಧಿಕಾರಿಗಳ ಬ್ಯಾಚ್‌ನಲ್ಲಿ 36ನೇ ರ್ಯಾಂಕ್ ಪಡೆದಿದ್ದ ಹಿರಿಯ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರು ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ, ಕೊಪ್ಪಳ ತಾಲೂಕು ಪಂಚಾಯತ್ ನಲ್ಲಿ ಸಿಇಓ ಹಾಗೂ ಗುಲ್ಬರ್ಗಾದಲ್ಲಿ ಎಸಿಯಾಗಿ ಸೇವೆ ಸಲ್ಲಿಸಿ ತಮ್ಮ ದಕ್ಷ ಆಡಳಿತದ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು. 
 
ಇತ್ತೀಚೆಗೆ ಸರ್ಕಾರ ಅವರನ್ನು ರಾಜ್ಯದ ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರನ್ನಾಗಿ ನೇಮಿಸಿತ್ತು. ಅಲ್ಲಿಯೂ ಕೂಡ ಉತ್ತಮ, ದಕ್ಷ ಆಡಳಿತವನ್ನು ತೋರಿದ್ದ ಅಧಿಕಾರಿ ರವಿ, ಬೆಂಗಳೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕಳೆದ ಸೋಮವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 

Share this Story:

Follow Webdunia kannada