Select Your Language

Notifications

webdunia
webdunia
webdunia
webdunia

ನಂದಿತಾ ದೇಹದಲ್ಲಿ ಇಲಿ ಪಾಷಾಣ ರೆಟಾಲ್ ಪತ್ತೆ

ನಂದಿತಾ ದೇಹದಲ್ಲಿ ಇಲಿ ಪಾಷಾಣ ರೆಟಾಲ್ ಪತ್ತೆ
ತೀರ್ಥಹಳ್ಳಿ , ಮಂಗಳವಾರ, 25 ನವೆಂಬರ್ 2014 (17:43 IST)
ನಂದಿತಾ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ನಂದಿತಾ ದೇಹದಲ್ಲಿ ಇಲಿ ಪಾಶಾಣ ಪತ್ತೆಯಾಗಿದೆ ಎಂದು ವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಿಐಡಿ ಅಧಿಕಾರಿಗಳು ಸರ್ಕಾರಕ್ಕೆ ಈ ಕುರಿತು ವರದಿ ಸಲ್ಲಿಸಲಿದ್ದಾರೆ.

ಮಣಿಪಾಲದಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಇಲಿ ಪಾಶಾಣ ರೆಟಾಲ್ ಪತ್ತೆಯಾಗಿದೆ. ಆದರೆ ನಂದಿತಾ ವಿಷ ಸ್ವಯಂ ಸೇವಿಸಿದ್ದಾಳಾ ಅಥವಾ ವಿಷಪ್ರಾಶನ ಮಾಡಲಾಗಿದೆಯೇ ಎಂಬ ಬಗ್ಗೆ ಸಿಐಡಿ ತನಿಖೆ ಮುಂದುವರಿಸಿದೆ.

ನಂದಿತಾ ಸಾವಿಗೆ 10 ಗಂಟೆ ಮುಂಚೆ ನಂದಿತಾ ದೇಹದಲ್ಲಿ ವಿಷ ಸೇರಿದೆ. ಆದರೆ ನಂದಿತಾಳನ್ನು ಆನಂದಗಿರಿ ಬೆಟ್ಟಕ್ಕೆ ಯಾರು ಕರೆದುಕೊಂಡು ಹೋದರು ವಿಷಪ್ರಾಶನವಾಗಿದ್ದು ಹೇಗೆ ಎನ್ನುವುದು ಇನ್ನೂ ಪತ್ತೆಯಾಗಿಲ್ಲ, ಈ ಎಲ್ಲಾ ವಿಚಾರಗಳ ಬಗ್ಗೆಯೂ ಸಾಕಷ್ಟು ಗೊಂದಲವಿದ್ದು, ಆ ದಿಕ್ಕಿನಲ್ಲಿ ತನಿಖೆ ನಡೆಯಬೇಕಿದೆ. 

Share this Story:

Follow Webdunia kannada