ಸಾವಿನಲ್ಲೂ ಒಂದಾದ ತಾಯಿ- ಮಗ

Webdunia
ಶುಕ್ರವಾರ, 21 ಅಕ್ಟೋಬರ್ 2016 (08:56 IST)
ಅಮ್ಮ.. ಈ ಪದಕ್ಕೆ ಸಮನಾದ ಪದ ಇನ್ಯಾವುದು ಇಲ್ಲ. ಈ ಸಂಬಂಧಕ್ಕಿಂತ ಹಿರಿದಾದ ಸಂಬಂಧವೂ ಇಲ್ಲ. ತನ್ನ ಕರುಳ ಕುಡಿಗಾಗಿ ಏನನ್ನು ಮಾಡಲು ಬೇಕಾದರೂ ತಾಯಿ ತಯಾರಾಗಿರುತ್ತಾಳೆ. ತನ್ನ ಜೀವನವನ್ನೆಲ್ಲ ತಾನು ಹೆತ್ತ ಮಗುವಿಗಾಗಿಯೇ ಮೀಸಲಾಗಿಡುತ್ತಾಳೆ. ಇಂತಹ ತಾಯಿ ತನ್ನ ಮಕ್ಕಳ ಸಾವನ್ನು ಕಣ್ಣಾರೆ ಕಾಣಲು ಅಪೇಕ್ಷಿಸುತ್ತಾರಾ? ಯಾವ ಪೋಷಕರು ಇದನ್ನು ಬಯಲಾರರು. ಅದನ್ನು ಸಹಿಸಿಕೊಳ್ಳುವ ಶಕ್ತಿ ಹೊಂದಿರಲಾರರು. ದುರದೃಷ್ಟವಶಾತ್ ಆ ತಾಯಿಗಾಗಿದ್ದು ಅದೇ. 

ಆಕೆಯ ಕಣ್ಣ ಮುಂದೆಯೇ ಮಗ ಸಾವನ್ನಪ್ಪಿದ್ದ. ಅದನ್ನು ಕೇಳಿದ ಕೂಡಲೇ ತಾಯಿ ಕೂಡ ದುರ್ಮರವನ್ನಪ್ಪಿದ್ದಾಳೆ. ಈ ಹೃದಯವಿದ್ರಾವಕ ಘಟನೆ ನಡೆದಿರುವುದು ಹಾವೇರಿ ತಾಲ್ಲೂಕಿನ ಹಾವನೂರು ಗ್ರಾಮದಲ್ಲಿ ನಡೆದಿದೆ. ಪರಿಮಳಾ ಕಮ್ಮಾರ( 75) ಮೃತ ವೃದ್ಧೆ.
 
ಪ್ರಮೀಳಾ ಪುತ್ರ ಮೌನೇಶ್ ಕಮ್ಮಾರ (38) ಹಲವು ದಿನಗಳಿಂದ ಕಾಮಾಲೆಯಿಂದ ಬಳಲುತ್ತಿದ್ದು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವನ್ನಪ್ಪಿದ್ದಾರೆ. ಈ ಸುದ್ದಿ ಕೇಳುತ್ತಿದ್ದಂತೆ ತಾಯಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 
 
ಒಂದೇ ದಿನ ಇಬ್ಬರನ್ನು ಕಳೆದುಕೊಂಡ ಪರಿವಾರದವರ ಆಕ್ರಂದನ ಮುಗಿಲು ಮುಟ್ಟಿದೆ. ಇಂದು ಸ್ವಗ್ರಾಮದಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆಯಲಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಂತಿದ್ದ ಲಾರಿಗೆ ಕಾರು ಡಿಕ್ಕಿ, ಈಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ದಾರುಣ ಸಾವು

ಖಮೇನಿ ಹತ್ಯೆಯನ್ನು ಖಂಡಿಸಿ, ಟ್ರಂಪ್ ವಿರುದ್ಧ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ

ಖಮೇನಿ ಹತ್ಯೆ ಖಂಡಿಸಿ ಇಸ್ರೇಲ್‌ ಯುಎಸ್ ವಿರುದ್ಧ ಗುಡುಗಿದ ರಷ್ಯಾ ಅಧ್ಯಕ್ಚ ಪುಟಿನ್

ಖಮೇನಿ ಹತ್ಯೆಗೆ ಇದೀಗ ಪ್ರತೀಕಾರ ತೀರಿಸಿಕೊಳ್ಳುವ ಸಮಯ: ಇರಾನ್ ಅಧ್ಯಕ್ಷ

ಲಕ್ಷಾಂತರ ಮಂದಿ ಕಾರ್ಯಕರ್ತರು ನೋವಿನಲ್ಲೇ ದಿನ ಕಳೆಯುತ್ತಿದ್ದಾರೆ: ಈಶ್ವರಪ್

ಮುಂದಿನ ಸುದ್ದಿ
Show comments