ನಕಲಿ ರೈತರ ಖಾತೆ ಸೇರಿದ ಹಣ

Webdunia
ಸೋಮವಾರ, 26 ಜೂನ್ 2023 (18:00 IST)
ರಾಜ್ಯಾದ್ಯಂತ ಕೋಟಿ ಕೋಟಿ ಕಿಸಾನ್ ಸಮ್ಮಾನ್ ನಿಧಿ, ನಕಲಿ ರೈತರ ಖಾತೆ ಸೇರಿದೆ. 1 ಲಕ್ಷದ 99 ಸಾವಿರ ನಕಲಿ ರೈತರ ಖಾತೆಗಳಿಗೆ, ಕೇಂದ್ರ ಸರ್ಕಾರದಿಂದ 122 ಕೋಟಿ ಕಿಸಾನ್ ಸಮ್ಮಾನ್ ಹಣ ಪಾವತಿಸಿರುವುದು ಬೆಳಕಿಗೆ ಬಂದಿದೆ. ಈ ಪೈಕಿ ಕೇವಲ 81 ಲಕ್ಷ ರೂಪಾಯಿ ಮಾತ್ರ ನಕಲಿ ರೈತರಿಂದ ವಸೂಲಿ ಮಾಡಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ. ಇನ್ನು‌ 89,500 ನಕಲಿ ರೈತರಿಗೆ 34 ಕೋಟಿ ಹಣವನ್ನ ಕಿಸಾನ್ ಸಮ್ಮಾನ್ ನಿಧಿಯಡಿ ರಾಜ್ಯ ಸರ್ಕಾರ ಪಾವತಿಸಿತ್ತು. ಈ ಹಣವನ್ನೂ ಸಹ ಪೂರ್ಣ ಪ್ರಮಾಣದಲ್ಲಿ ಇಂದಿಗೂ ವಸೂಲಿ ಮಾಡಲಾಗಿಲ್ಲ. ಆನ್ ಲೈನ್ ಮೂಲಕ ರೈತರು ಕಿಸಾನ್ ಸಮ್ಮಾನ್ ನಿಧಿಗೆ ಅರ್ಜಿ ಸಲ್ಲಿಸಬೇಕು. ಆನ್ ಲೈನಲ್ಲಿ ನೆರೆ ರಾಜ್ಯದ ಕೆಲ ಸೈಬರ್ ಖದೀಮರು ಕಿಸಾನ್ ಸಮ್ಮಾನ ನಿಧಿಗೆ ಅರ್ಜಿ ಹಾಕಿದ್ದಾರೆ. ಸೂಕ್ತ ದಾಖಲೆ ಪರಿಶೀಲಿಸದೇ ಕೃಷಿ ಅಧಿಕಾರಿಗಳು ಆನಲೈನಲ್ಲಿ ಅರ್ಜಿ‌ ಹಾಕಿದವರಿಗೆಲ್ಲ ಹಣ ಪಾವತಿಸಿ ಅಕ್ರಮ ಎಸಗಿದ್ದಾರೆ.
ಬಿಹಾರ, ಪಶ್ಚಿಮ ಬಂಗಾಳ, ಹರಿಯಾಣ ಸೇರಿ ಹೊರ ರಾಜ್ಯದ ನಕಲಿ ರೈತರಿಗೆ ರಾಜ್ಯದ ಕಿಸಾನ್ ಸಮ್ಮಾನ್ ನಿಧಿ ಪಾವತಿಸಿದ್ದು ಬಯಲಾಗಿದೆ. ನಿಜವಾದ ಅನ್ನದಾತರಿಗೆ ಪಾವತಿಯಾಗಬೇಕಿದ್ದ ನೂರಾರು ಕೋಟಿ ಹಣ ಕಿಸಾನ್ ಸಮ್ಮಾನ್ ನಿಧಿ‌ ಅನ್ಯರ ಖಾತೆಗೆ ಪಾವತಿಸಿ ಅಕ್ರಮವೆಸಗಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತಕ್ಕೆ ಬಂದ ವ್ಲಾಡಿಮಿರ್ ಪುಟಿನ್ ಎಲ್ಲೂ ಮಾಡದ ಕೆಲಸವನ್ನು ಇಲ್ಲಿ ಮಾಡಿದ್ರು

ಮತಿಗೇಡಿಗಳಾದ್ರೂ ಪರವಾಗಿಲ್ಲ, ಲಜ್ಜೆಗೇಡಿಯಾಗಬಾರದು: ಸಿದ್ದರಾಮಯ್ಯಗೆ ಅಶೋಕ್ ಟಾಂಗ್

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕುರ್ಚಿ ಫೈಟ್ ಗೆ ಟ್ವಿಸ್ಟ್ ಕೊಡ್ತಿರೋದು ಇವರೇ

Karnataka Weather: ಚಳಿ ನಡುವೆಯೂ ಇಂದು ಈ ಜಿಲ್ಲೆಗಳಲ್ಲಿ ಮಳೆ

ವಾಚ್ ಪ್ರಶ್ನೆಯೆತ್ತಿದ ನಾರಾಯಣಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ ಪ್ರತಿಕ್ರಿಯೆ

ಮುಂದಿನ ಸುದ್ದಿ
Show comments