ಮತ್ತೆ ರಾಜ್ಯ ಸರ್ಕಾರದ ಕಿವಿ ಹಿಂಡಿದ ಮೋಹನ್ ದಾಸ್ ಪೈ: ಇಲಾಖೆಗಳಲ್ಲಿ ರೆಡ್‌ ಕಾರ್ಡ್‌ ಫಿಕ್ಸ್‌ ಆಗಿದೆ ಎಂದಿದ್ಯಾಕೆ

Sampriya
ಶನಿವಾರ, 25 ಅಕ್ಟೋಬರ್ 2025 (14:27 IST)
Photo Credit X
ಬೆಂಗಳೂರು: ಭ್ರಷ್ಟಾಚಾರ ಮತ್ತು ಬೆಂಗಳೂರು ರಸ್ತೆ ಗುಂಡಿಗಳ ಬಗ್ಗೆ ಕಿಡಿಕಾರಿದ್ದ ಉದ್ಯಮಿ ಮೋಹನ್ ದಾಸ್ ಪೈ ಅವರು ಮತ್ತೆ ಸಿದ್ದರಾಮಯ್ಯ ಸರ್ಕಾರದ ಕಿವಿಹಿಂಡಿದ್ದಾರೆ. 

ಮುಖ್ಯಮಂತ್ರಿಗಳೇ ನಿಮ್ಮ ಇಲಾಖೆಗಳಲ್ಲಿ ಭ್ರಷ್ಟಾಚಾರ ಭಾರೀ ಹೆಚ್ಚಾಗಿದೆ. ಒಂದೊಂದು ಇಲಾಖೆಗಳೂ ರೇಡ್‌ ಕಾರ್ಡ್‌ ಇಟ್ಟುಕೊಂಡಿವೆ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ. 

ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಟೀಕಿಸಿದ್ದ ಉದ್ಯಮಿ ಪೈ ಅವರು ಬೆಂಗಳೂರು ರಸ್ತೆಯ ಅವ್ಯವಸ್ಥೆ ಬಗ್ಗೆ ಟೀಕಿಸಿದ್ದರು. ಇದು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ಇದನ್ನೆ ಮುಂದಿಟ್ಟುಕೊಂಡು ವಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. 

ಕೈಗಾರಿಕೆ ಅನುಮೋದನೆಗೆ ಕಾಲಮಿತಿ, ಹೂಡಿಕೆದಾರರಿಗೆ ಸಮಸ್ಯೆ ತಪ್ಪಿಸಲು ಏಕಗವಾಕ್ಷಿ ಯೋಜನೆಯಡಿ ಅನುಮೋದನೆಗೆ ರಾಜ್ಯ ಸರ್ಕಾರ ಪ್ಲ್ಯಾನ್‌ ಮಾಡಿದೆ. ಅದಕ್ಕಾಗಿ ನೆರೆಯ ರಾಜ್ಯಗಳಲ್ಲಿ ಅನುಮೋದನೆ ಸಿಗುತ್ತಿರುವ ಬಗ್ಗೆ ಅಧ್ಯಯನಕ್ಕೆ ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ಅವರು ಹಲವು ಸಲಹೆಯನ್ನೂ ನೀಡಿದ್ದಾರೆ.

ಮುಖ್ಯಮಂತ್ರಿಗಳೇ ನಿಮ್ಮ ಯೋಚನೆಗೆ ಧನ್ಯವಾದಗಳು. ಆದರೆ, ಅಧಿಕಾರಿಗಳು ಸಹ ನಂತರ ಅನುಮೋದನೆ ನೀಡಬೇಕಾಗಿರೋದ್ರಿಂದ ಏಕಗವಾಕ್ಷಿ ಯೋಜನೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಏಕೆಂದರೆ ಇಲಾಖೆಗಳಲ್ಲಿ ಭ್ರಷ್ಟಾಚಾರ ತೀರಾ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಒಂದೊಂದು ಇಲಾಖೆಯಲ್ಲಿಯೂ ರೇಟ್ ಕಾರ್ಡ್ ಇಟ್ಟುಕೊಂಡಿದ್ದಾರೆ. ಆದ್ದರಿಂದ ದಯವಿಟ್ಟು ಆಂಧ್ರಪ್ರದೇಶದ ಮಾದರಿಯಲ್ಲಿ ಸೆಲ್ಫ್ ಸರ್ಟಿಫಿಕೇಟ್‌ ಸಿಗುವಂತೆ (ಸ್ವಯಂ ಪ್ರಮಾಣೀಕರಣಗಳ ಮೇಲೆ ಅನುಮೋದನೆಯನ್ನು ಸ್ವಯಂಚಾಲಿತವಾಗಿ ಮಾಡಿ) ಕೈಗಾರಿಕೆಗಳ ಸ್ಥಾಪನೆಗೆ ಯೋಜನೆ ರೂಪಿಸಿ ಎಂದು ಅವರು ಮನವಿ ಮಾಡಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮನ್ನು ಟೀಕಿಸುತ್ತಾರೆಂದು ಸುಮ್ಮನೇ ಬಿಡಲು ಸಾಧ್ಯವಿಲ್ಲ: ಮಜುಂದೂರ್ ಬಗ್ಗೆ ಡಿಕೆಶಿ ಹೀಗಂದ್ರು

ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸ್ಕೆಚ್‌ ಹಾಕಿದ್ದ ಏಜೆಂಟ್ ನಿಗೂಢ ಸಾವು, ಏನಿದು

ನವೆಂಬರ್ ಕ್ರಾಂತಿ ಸದ್ದು ಬೆನ್ನಲ್ಲೇ ಚರ್ಚೆಗೆ ಕಾರಣವಾದ ಲಕ್ಷ್ಮಣ ಸವದಿ ಹೇಳಿಕೆ

ಪರಪ್ಪನ ಅಗ್ರಹಾರ ಕಾಯಬೇಕಿದ್ದ ಜೈಲು ಸಿಬ್ಬಂದಿಯಿಂದಲೇ ಕನ್ನ, ಏನಿದು ಘಟನೆ

ಪ್ರಭಾಕರ್ ಭಟ್ ಆಗಲಿ, ಅವರಪ್ಪನಾಗಲಿ ಕಾನೂನು ಎಲ್ಲರಿಗೂ ಒಂದೇ: ಪ್ರಿಯಾಂಕ್ ಖರ್ಗೆ

ಮುಂದಿನ ಸುದ್ದಿ
Show comments