Webdunia - Bharat's app for daily news and videos

Install App

30 ಪ್ರಭಾವಿ ನಾಯಕರ ಪಟ್ಟಿಯಲ್ಲಿ ಮೋದಿಗೆ ಸ್ಥಾನ

Webdunia
ಶುಕ್ರವಾರ, 6 ಮಾರ್ಚ್ 2015 (12:51 IST)
ವಿಶ್ವದ 30 ಪ್ರಭಾವಿ ನಾಯಕರುಗಳ ಪಟ್ಟಿಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಸ್ಥಾನ ಪಡೆದಿದ್ದು, ಮೋದಿ ಅವರಲ್ಲೊಬ್ಬರಾಗುವ ಮೂಲಕ ಮತ್ತೊಮ್ಮೆ ಶೈನಿಂಗ್ ಆಗಿದ್ದಾರೆ. 
 
ವಿಶ್ವದ 30 ಪ್ರಭಾವಿ ನಾಯಕರುಗಳ ಈ ಪಟ್ಟಿಯನ್ನು ಟೈಮ್ಸ್ ನಿಯತಕಾಲಿಕೆ ಹೊರತಂದಿದ್ದು, ಭಾರತ ಪ್ರಧಾನಿ ನರೇಂದ್ರ ಮೋದಿಗೆ ಸ್ಥಾನ ಸಿಕ್ಕಿದೆ.
 
ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಅವರಿಗಿರುವ ಜನಪ್ರಿಯತೆ ಹಾಗೂ ಮಾಧ್ಯಮಗಳಲ್ಲಿ ಹೊಂದಿರುವ ಖ್ಯಾತಿಯನ್ನಾಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಟೈಮ್ಸ್ ನಿಯತಕಾಲಿಕೆಯ ನಿರ್ವಹಣಾ ಮಂಡಳಿ ತಿಳಿಸಿದೆ. 
 
ನಿಯತಕಾಲಿಕೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಮೋದಿ ಅವರಿಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಹಾಗೂ ಟ್ವಿಟರ್‌ಗಳಲ್ಲಿ ಮೋದಿ ಅವರಿಗೆ ಒಟ್ಟು 38 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಈ ಪಟ್ಟಿಯಲ್ಲಿ ಅಮೆರಿಕಾ ಅದ್ಯಕ್ಷ ಬರಾಕ್ ಒಬಾಮಾ ಅವರಿಗೂ ಕೂಡ ಸ್ಥಾನ ಸಿಕ್ಕಿದ್ದು, ಬರಾಕ್ ಒಬಾಮಾ ಹೊರತುಪಡಿಸಿದರೆ ಮೋದಿಗೆ ಅತಿ ಹೆಚ್ಚಿನ ಫಾಲೋವರ್ಸ್ ಇರುವುದಾಗಿ ನಿಯತಕಾಲಿಕೆ ಪ್ರಕಟಿಸಿದೆ. 
 
ಹ್ಯಾರಿ ಪಾಟರ್ ಸಿರೀಸ್ ಎಂಬ ಶೀರ್ಷಿಕೆ ಅಡಿಯಲ್ಲಿ ಈ ಪಟ್ಟಿಯನ್ನು ಹೊರ ತಂದಿದ್ದು, ಬ್ರಿಟೀಷ್ ಲೇಖಕ ಜೆ.ಕೆ.ರೌವ್‌ಲಿಂಗ್, ಸಿಂಗರ್ ಟೇಲರ್ ಸ್ವಿಫ್ಟ್ ಹಾಗೂ ಬೇಯಾನ್ಸ್ ಕೂಡ ಈ ಪರೀಷ್ಕೃತ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments