ತೆಲಂಗಾಣದಲ್ಲಿ ಪ್ರಧಾನಿ ಮೋದಿ ಭಾಷಣ ಇದೀಗ ಬಾರಿ ವೈರಲ್ ಆಗಿದೆ. 2020ರಲ್ಲಿ ನಡೆದ ಘಟೆನೆ ವಿವರಿಸಿದ ಪ್ರಧಾನಿ ನರೇಂದ್ರ ಮೋದಿ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ನಡೆ ಬಹಿರಂಗಪಡಿಸಿದ್ದಾರೆ. 2020ರಲ್ಲಿ ಹೈದರಾಬಾದ್ ಮುನ್ಸಿಪಲ್ ಚುನಾವಣೆ ನಡೆದಿತ್ತು. ಬಿಜೆಪಿ 48 ಸ್ಥಾನ ಗೆದ್ದು ಅತೀ ದೊಡ್ಡ ಪಕ್ಷವಾಗಿತ್ತು. ಆದರೆ ಯಾರಿಗೂ ಬಹುಮತ ಸಿಕ್ಕಿರಲಿಲ್ಲ. ಫಲಿತಾಂಶದ ಬೆನ್ನಲ್ಲೇ ಕೆಸಿಆರ್ ದೆಹಲಿಗೆ ಆಗಮಿಸಿ ನನ್ನ ಭೇಟಿಯಾಗಿದ್ದರು. ಈ ವೇಳೆ ಹೈದರಾಬಾದ್ ಮುನ್ಸಿಪಲ್ನಲ್ಲಿ ಬಿಆರ್ಎಸ್ ಪಕ್ಷಕ್ಕೆ ಬೆಂಬಲ ನೀಡಿ, ನಾವು ಎನ್ಡಿಎ ಒಕ್ಕೂಟ ಸೇರಿಕೊಳ್ಳುತ್ತೇವೆ ಎಂಬ ಮನವಿ ಮಾಡಿದ್ದರು. ನಿಮ್ಮ ರಾಜಕೀಯ ಉದ್ದೇಶ, ಅಧಿಕಾರಕ್ಕಾಗಿ ತೆಲಂಗಾಣ ಜನತೆಗೆ ಮೋಸ ಮಾಡಲಾರೆ ಎಂದು ಉತ್ತರ ನೀಡಿದ್ದೆ ಎಂದು ಪ್ರಧಾನಿ ಮೋದಿ ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.