Select Your Language

Notifications

webdunia
webdunia
webdunia
webdunia

ಕಪ್ಪು ಹಣದ ವಿರುದ್ಧ ಸಮರ ಸಾರಿದ ಮೋದಿಗೆ ಬಿಜೆಪಿಯವರ ಕಪ್ಪು ಹಣ ಕಾಣೋಲ್ಲವೇ: ಲಾಡ್

ಕಪ್ಪು ಹಣದ ವಿರುದ್ಧ ಸಮರ ಸಾರಿದ ಮೋದಿಗೆ ಬಿಜೆಪಿಯವರ ಕಪ್ಪು ಹಣ ಕಾಣೋಲ್ಲವೇ: ಲಾಡ್
ಬಳ್ಳಾರಿ , ಗುರುವಾರ, 17 ನವೆಂಬರ್ 2016 (13:45 IST)
ಕಪ್ಪು ಹಣದ ವಿರುದ್ಧ ಸಮರ ಸಾರಿದ್ದೇವೆ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರದ್ದೆ ಪಕ್ಷದವರ ಅದ್ಧೂರಿ ವಿವಾಹ ಕುರಿತು ಅವರಿಗೆ ಗೊತ್ತಿರಲಿಲ್ವೆ ಎಂದು ಶಾಸಕ ಅನಿಲ್ ಲಾಡ್ ನೇರವಾಗಿ ಪ್ರಶ್ನಿಸಿದ್ದಾರೆ.
 
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಗಣಿಧಣಿ ತಮ್ಮ ಪುತ್ರಿಯ ಅದ್ಧೂರಿ ವಿವಾಹಕ್ಕೆ 500 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಅವರ ಬಳಿ ಅಷ್ಟೊಂದು ಹಣ ಎಲ್ಲಿಂದ ಬಂತು?. ರೆಡ್ಡಿ ಪುತ್ರಿಯ ವಿವಾಹಕ್ಕೆ ವೆಚ್ಚ ಮಾಡಿರುವ ಹಣ ಬ್ಲ್ಯಾಕ್ ಮನಿ ಅಥವಾ ವೈಟ್ ಮನಿ ಎನ್ನುವ ಕುರಿತು ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.
 
ನಾವು ಹಲವು ವರ್ಷಗಳಿಂದ ಗಣಿ ಉದ್ಯಮ ಮಾಡುತ್ತಿದ್ದೇವೆ. ರಾಜ್ಯ ಸರಕಾರ ಹಾಗೂ ಮೋದಿ ಮೊದಲು ನಮ್ಮ ಮನೆಯ ಮೇಲೆಯೇ ರೈಡ್ ಮಾಡಲಿ ಎಂದು ಸವಾಲ್ ಎಸೆದಿದ್ದಾರೆ.
 
ಕಪ್ಪು ಹಣದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಎಂದು ಮೋದಿ ಹೇಳುತ್ತಿದ್ದಾರೆ. ಕಪ್ಪು ಹಣ ತಡೆಗಟ್ಟಲು ಆದಾಯ ಇಲಾಖೆ ಇರಲಿಲ್ವೆ? ಕಾಳಧನಿಕರ ಮೇಲೆ ದಾಳಿ ಮಾಡಬೇಕಿತ್ತು ಎಂದು ಶಾಸಕ ಅನಿಲ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರೆಡ್ಡಿ ಪುತ್ರಿಯ ವಿವಾಹಕ್ಕೆ ಹೋದವರಿಗೆ ನಾಚಿಕೆಯಾಗಬೇಕು: ಪೂಜಾರಿ