Select Your Language

Notifications

webdunia
webdunia
webdunia
webdunia

ನಾಳೆ ಉದ್ಯಾನನಗರಿಗೆ ಆಗಮಿಸಲಿರುವ ಮೋದಿ-ಏಂಜೆಲಾ: 23 ರಸ್ತೆಗಳ ಸಂಚಾರ ನಿಷೇಧ

ನಾಳೆ ಉದ್ಯಾನನಗರಿಗೆ ಆಗಮಿಸಲಿರುವ ಮೋದಿ-ಏಂಜೆಲಾ: 23 ರಸ್ತೆಗಳ ಸಂಚಾರ ನಿಷೇಧ
ಬೆಂಗಳೂರು , ಸೋಮವಾರ, 5 ಅಕ್ಟೋಬರ್ 2015 (16:44 IST)
ಪ್ರಧಾನಿ ನರೇಂದ್ರ ಮೋದಿ ಹಾಗೂ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಅವರು ನಾಳೆ ಉದ್ಯಾನನಗರಿ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ನಗರದ 23 ಪ್ರಮುಖ ರಸ್ತೆಗಳ ಸಂಚಾರವನ್ನು ಸ್ಥಗಿತಗಳಿಸಲಾಗಿದೆ. 
 
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್, ನಾಳೆ ಪ್ರಧಾನಿ ಮೋದಿ ಹಾಗೂ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಅವರು ಆಗಮಿಸುತ್ತಿದ್ದಾರೆ. ಅಲ್ಲದೆ ಈ ವೇಳೆ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿರುವ ಭಾಷ್ ಕಂಪನಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಭೇಟಿಗೆ ಯಾವುದೇ ತೊಂದರೆಯಾಗದಂತೆ ನಗರದ 23 ರಸ್ತೆಗಳ ಸಂಚಾರವನ್ನು ಬೆಳಗ್ಗೆ 9 ಗಂಟಯಿಂದ ಸಂಜೆ 3 ಗಂಟೆ ವರೆಗೆ ಸ್ಥಗಿತಗೊಳಿಸುತ್ತಿದ್ದು, ಅದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು. 
 
ನಗರದ ಕೆ.ಕೆ.ರಸ್ತೆ, ಚೌಡಯ್ಯ ರಸ್ತೆ, ಹರಿಕೃಷ್ಣ ರಸ್ತೆ, ಚೌಡಯ್ಯ ರಸ್ತೆ, ಆಲಿ ಅಸಗರ್ ರಸ್ತೆ, ಕಸ್ತೂರ್ ಬಾ ರಸ್ತೆ, ವಿಠಲ್ ಮಲ್ಯ ರಸ್ತೆ, ಲ್ಯಾಂಗ್ ಫೋರ್ಡ್ ರಸ್ತೆ, ಮೈಕೋ ಇನ್ನರ್ ರೋಡ್, ಕೋರಮಂಗಲ ರಿಂಗ್ ರಸ್ತೆ, ಹೆಚ್ಎಎಲ್, ಟ್ರಿನಿಟಿ ರಸ್ತೆ ಹಾಗೂ ರಿಚ್ ಮಂಡ್ ರಸ್ತೆ ಸೇರಿದಂತೆ ಇತರೆ ರಸ್ತೆಗಳಲ್ಲಿ ಸಾರ್ವಜನಿಕರ ಓಡಾಟವನ್ನು ಒಂದು ದಿನದ ಮಟ್ಟಿಗೆ ನಿಷೇಧಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾಷ್ ಕಂಪನಿಗೆ ಭೇಟಿ ನೀಡಿದ ಬಳಿಕ ನಗರದ ಲೀಲಾ ಪ್ಯಾಲೇಸ್‌ನಲ್ಲಿ ಸಭೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

Share this Story:

Follow Webdunia kannada