ಬೆನ್ನಿಗೆ ಚೂರಿ ಹಾಕಿಲ್ಲ ಎಂದು ತಿರುಗೇಟು ನೀಡಿದ ಶಾಸಕ!

Webdunia
ಬುಧವಾರ, 20 ಫೆಬ್ರವರಿ 2019 (16:28 IST)
ದಿನೇಶ್ ಗುಂಡುರಾವ್ ಹೇಳಿಕೆಗೆ ಅಥಣಿ ಶಾಸಕ ತಿರುಗೇಟು ನೀಡಿದ್ದಾರೆ.

ಪಕ್ಷ ತೊರೆಯುವವರು ಬೆನ್ನಿಗೆ ಚೂರಿ ಹಾಕಬಾರದು. ಸರ್ಕಾರದ ಸ್ಥಿತಿ ಡೋಲಾಯಮಾನ ಆಗುವ ಹಾಗೆ ನಡೆದುಕೊಳ್ಳಬಾರದು ಎಂದಿದ್ದ ದಿನೇಶ್ ಗುಂಡುರಾವ್ ಹೇಳಿಕೆಗೆ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ತಿರುಗೇಟು ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ಮತಕ್ಷೇತ್ರದ ಶಾಸಕ ಮಹೇಶ್ ಕುಮಠಳ್ಳಿ ಹೇಳಿಕೆ ನೀಡಿದ್ದು, ಬೆನ್ನಿಗೆ ಚೂರಿ ಯಾರೂ ಹಾಕುತ್ತಿಲ್ಲ ಎಲ್ಲರೂ ಪಕ್ಷದಲ್ಲಿ ಇದ್ದೇವೆ. ನಮ್ಮ ಕೆಲಸಗಳಿಗಾಗಿ ಹಠ ಮಾಡಿದ್ದೇವೆ. ನನ್ನ ಗೆಲುವಿಗೆ ಕ್ಷೇತ್ರದ ಸಮಸ್ತ ನಾಗರೀಕರು, ಕಾಂಗ್ರೆಸ್ ಮುಖಂಡರು ಕಾರಣ ಎಂದಿದ್ದಾರೆ.

ಅಭಿವೃದ್ಧಿ ಕೆಲಸ ಮಾಡಲು ಸಹಕರಿಸಿ ಎಂದು ಮಹೇಶ್ ಕುಮಠಳ್ಳಿ ಹೇಳಿದರು.
ಈ ಮೊದಲು ರಮೇಶ್ ಜಾರಕಿಹೊಳಿ ಜೊತೆ ಮುಂಬೈಗೆ ತೆರಳಿದ್ದ ವೇಳೆ ನನ್ನ ಗೆಲುವಿಗೆ ರಮೇಶ್ ಜಾರಕಿಹೊಳಿ ಕಾರಣ. ಅದಕ್ಕಾಗಿ ಅವರೊಂದಿಗೆ ಇದ್ದೇನೆ ಎಂದು ಈ ಹಿಂದೆ ಮಹೇಶ್ ಕುಮಠಳ್ಳಿ ಹೇಳಿದ್ದರು.

ರೈತ ಮುಖಂಡನ ಜೊತೆಗಿನ ಪೋನ್ ಸಂಭಾಷಣೆಯ ಆಡಿಯೋ ವೈರಲ್ ಆದ ಬಳಿಕ ಮುಜಗುರಕ್ಕೆ ಒಳಗಾಗಿದ್ದ ಮಹೇಶ್ ಕುಮಠಳ್ಳಿ, ಹೇಬಿಯಸ್ ಕಾರ್ಪಸ್ ಹಿನ್ನೆಲೆಯಲ್ಲಿ ಹೈಕೋರ್ಟ್ ಗೆ ಹಾಜರಾಗಲು ಆಗಮಿಸಿದ್ದಾರೆ. 


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಯೋದ್ಯೆಯ ರಾಮಮಂದಿರದ ಸಂಕಿರ್ಣದೊಳಗೆ ನಮಾಜ್ ಮಾಡಲು ಹೋದ ಮುಸ್ಲಿಂ ವ್ಯಕ್ತಿ

ಅಪಘಾತಕ್ಕೀಡಾದ ಸಣ್ಣ ವಿಮಾನ, ಪೈಲಟ್ ಸಮಯಪ್ರಜ್ಞೆ ಉಳಿಸಿತು 6ಮಂದಿಯ ಜೀವ

ವಾಯುಮಾಲಿನ್ಯ, ಶೀತಗಾಳಿಗೆ ಸುಸ್ತಾದ ರಾಷ್ಟ್ರ ರಾಜಧಾನಿ ಮಂದಿ

ಕಾಸರಗೋಡಿನಲ್ಲಿ ಕನ್ನಡಿಗರಿಗೆ ಅನ್ಯಾಯ: ಕೊನೆಗೂ ಕರ್ನಾಟಕದ ಆರೋಪಕ್ಕೆ ಉತ್ತರಿಸಿದ ಕೇರಳ ಸಿಎಂ

ನೆಹರೂ ಒಪ್ಪಿಗೆಗೆ ವಿರುದ್ಧವಾಗಿ ಐತಿಹಾಸಿಕ ಸೋಮನಾಥ ಮಂದಿರ ನಿರ್ಮಾಣ: ಗೋವಿಂದ ಕಾರಜೋಳ

ಮುಂದಿನ ಸುದ್ದಿ
Show comments