Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಶಾಸಕ ನಡಹಳ್ಳಿ

ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಶಾಸಕ ನಡಹಳ್ಳಿ
ಗೋವಾ , ಶನಿವಾರ, 11 ಏಪ್ರಿಲ್ 2015 (13:43 IST)
ರಾಜ್ಯದ ಸಿಎಂ ಅಹಿಂದ ವರ್ಗಕ್ಕೆ ಸೇರಿದವರು ಎಂದು ಹೇಳುತ್ತಾರೆ. ಆದರೆ ಇಲ್ಲಿನ ಬೈನಾ ಬೀಚ್‌ನಲ್ಲಿ ನೆಲೆಸಿರುವ ಕನ್ನಡಿಗರೂ ಕೂಡ ಅಹಿಂದುಗಳೇ. ಆದರೆ ಇವರಿಗೆ ಪರಿಹಾರ ಒದಗಿಸುವಲ್ಲಿ ಸಿಎಂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವ ಮೂಲಕ ವಿಜಾಪುರ ಜಿಲ್ಲೆಯ ದೇವರಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರು ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
 
ಗೋವಾ ಸರ್ಕಾರವು ಇಲ್ಲಿನ ಬೈನಾ ಬೀಚ್‌ನಲ್ಲಿ ವಾಸವಾಗಿರುವ ಕನ್ನಡಿಗರ ಮನೆಗಳನ್ನು ತೆರವುಗೊಳಿಸಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಬೀಚ್‌ಗೆ ಭೇಟಿ ನೀಡಿದ್ದ ಶಾಸಕ ನಡಹಳ್ಳಿ, ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದರು. 
 
ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು, ನಾನೂ ಅಹಿಂದ ವರ್ಗಕ್ಕೆ ಸೇರಿದವನು ಎಂದು ಹಲವು ಬಾರಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಆದರೆ ಇಲ್ಲಿನ ಬೈನಾ ಬೀಚ್‌ನಲ್ಲಿ ನೆಲೆಸಿರುವವರೂ ಕೂಡ ಕನ್ನಡಿಗರೇ, ಗೋವಾ ಸರ್ಕಾರ ಇವರ ಇಲ್ಲಿನ ಮನೆಗಳನ್ನು ತೆರವುಗೊಳಿಸಲು ಮುಂದಾಗಿದೆ. ಆದರೆ ಈ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯನವರು ಮಧ್ಯ ಪ್ರವೇಶಿಸುತ್ತಿಲ್ಲ. ಇದಕ್ಕೆ ಕಾರಣ ಈ ನಿವಾಸಿಗಳೆಲ್ಲರೂ ಕೂಡ ಉತ್ತರ ಕರ್ನಾಟಕಕ್ಕೆ ಸೇರಿದವರು. ಆಲಮಟ್ಟಿ ಡ್ಯಾಂ ನಿರ್ಮಾಣ ವೇಲೆ ನಿರಾಶ್ರಿತರಾಗಿದ್ದರು ಎಂದ ಅವರು, ಸಿಎಂ ಅವರ ಈ ನಡವಳಿಕೆಯೇ ತಿಳಿಸುತ್ತದೆ ಉತ್ತರ ಕರ್ನಾಟಕಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂಬುದು ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯನವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 
 
ಇದೇ ವೇಳೆ, ಉತ್ತರ ಕರ್ನಾಟಕದ ಮೇಲೆ ಸಿಎಂ ಅವರಿಗೆ ಪ್ರೀತಿ ಇದೆ ಎಂದಾದರೆ ಇಲ್ಲಿನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಲಿ. ಆ ಮೂಲಕ ಉತ್ತರ ಕರ್ನಾಟಕದವರ ಮೇಲಿನ ಪ್ರೇಮವನ್ನು ಅವರು ತೋರಿಸಲಿ ಎಂದು ಸವಾಲೆಸೆದರು.  
 
ನಿನ್ನೆಯಷ್ಟೇ ಪ್ರತಿಕ್ರಿಯಿಸಿದ್ದ ಅವರು, ಸಿಎಂ ಸಿದ್ದರಾಮಯ್ಯನವರು ಇಲ್ಲಿನ ನೀರಾವರಿ ಯೋಜನೆಗಳಿಗೆ ಹಿಂದಿನ ಬಿಜೆಪಿ ಸರ್ಕಾರಕ್ಕಿಂತಲೂ ಕಡಿಮೆ ಅನುದಾನವನ್ನು ನೀಡುತ್ತಿದ್ದಾರೆ. ಇದು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸುತ್ತಿರುವ ಮುನ್ಸೂಚನೆಯೇ ಎನ್ನುವ ಮೂಲಕ ನಡಹಳ್ಳಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. 

Share this Story:

Follow Webdunia kannada