Webdunia - Bharat's app for daily news and videos

Install App

ಫಲಿತಾಂಶದಲ್ಲಿ ಗೊಂದಲ ಹಿನ್ನೆಲೆ ತಾರಕಕ್ಕೇರಿದ ವಿದ್ಯಾರ್ಥಿಗಳ ಪ್ರತಿಭಟನೆ: ಪೀಠೋಪಕರಣಗಳು ಧ್ವಂಸ

Webdunia
ಗುರುವಾರ, 21 ಮೇ 2015 (12:39 IST)
ರಾಜ್ಯದ ಶಿಕ್ಷಣ ಇಲಾಖೆಯು 2015ನೇ ಸಾಲಿನ ಪಿಯುಸಿ ಫಲಿತಾಂಶ ಪ್ರಕಟಣೆಯಲ್ಲಿ ಮಾಡಿರುವ ಬೃಹತ್ ಯಡವಟ್ಟಿನಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಕ್ಕೊಳಗಾಗಿದ್ದು, ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಯು ಇಂದು ತಾರಕಕ್ಕೇರಿದೆ.  
 
ರಾಜ್ಯದ್ಯಂತ ಹಲವು ಮಂದಿ ವಿದ್ಯಾರ್ಥಿಗಳ ಪೋಷಕರು ನಗರದ ಮಲ್ಲೇಶ್ವರಂನಲ್ಲಿರುವ ಪದವಿ ಪೂರ್ವ ಶಿಕ್ಷಣ ಮಂಡಳಿಯ ಪ್ರಧಾನ ಕಚೇರಿ ಎದುರು ಜಮಾಯಿಸಿದ್ದು, ಕಳೆದ ಮೂರು ದಿನಗಳಿಂದ ಪ್ರತಿಭಟಿಸುತ್ತಿದ್ದಾರೆ. ಆದರೆ ಶಿಕ್ಷಣ ಇಲಾಖೆ ಮಾತ್ರ ಇವರ ಪ್ರತಿಭಟನೆಯ ಬಗ್ಗೆ ಕಿಂಚಿತ್ತೂ ಕಾಳಜಿ ತೋರದೆ ಬೇಜವಾಬ್ದಾರಿ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಿನ ಪ್ರತಿಭಟನೆಯು ತಾರಕಕ್ಕೇರಿದ್ದು, ಪ್ರತಿಭಟನಾಕಾರರು ಕಚೇರಿಯ ಒಳ ಭಾಗಕ್ಕೆ ನುಗ್ಗಿ ಹಲವು ಪೀಠೋಪಕರಣಗಳನ್ನು ದ್ವಂಸಗೊಳಿಸಿದ್ದಾರೆ. ಇದೇ ವೇಳೆ, ಪ್ರತಿಭಟನೆ ಹಿನ್ನೆಲೆಯಲ್ಲಿ 20ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. 
 
ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮಂಡಳಿಯ ನಿರ್ದೇಶಕಿ ಸುಷ್ಮಾ ಗೋಡಬಲೆ ಅವರು, ಅನುಮಾನ ಬರುವ ಎಲ್ಲಾ ವಿಷಯಗಳ ನಕಲು ಪ್ರತಿಗಳನ್ನು ಪಡೆದು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ ಎನ್ನುವ ಮೂಲಕ ಹಾರಿಕೆಯ ಉತ್ತರ ನೀಡಿ ವಿದ್ಯಾರ್ಥಿಗಳ ಕೈಗೆ ಸಿಗದೆ ಕಣ್ಮರೆಯಾಗಿದ್ದಾರೆ.  
 
ಇನ್ನು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿಗಳು, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕೇವಲ ಒಂದು ವಿಷಯಕ್ಕೆ 2500ಕ್ಕೂ ಹೆಚ್ಚು ಶುಲ್ಕ ಪಾವತಿಸಬೇಕಿದ್ದು, ಅಷ್ಟು ದೊಡ್ಡ ಮೊತ್ತದ ಹಣ ಪಾವತಿಸಲು ನಮ್ಮಿಂದ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮಂಡಳಿ ಮತ್ತೆ ಯಾವುದೇ ವೆಚ್ಚವಿಲ್ಲದೆ ಮರು ಮೌಲ್ಯ ಮಾಪನ ಮಾಡಿ ಸೂಕ್ತವಾದ ಫಲಿತಾಂಶವನ್ನು ಪ್ರಕಟಿಸಲಿ ಎಂದು ಒತ್ತಾಯಿಸಿದ್ದಾರೆ. 
 
ಪ್ರತಿಭಟನೆಗೆ ಕಾರಣವೇನು?
ಪಿಯುಸಿ ಫಲಿತಾಂಶವು ಕಳೆದ ಮೇ 18ರಂದು ಪ್ರಕಟವಾಗಿದ್ದು, ಸರ್ಕಾರವೇ 3 ವೆಬ್‌ಸೈಟ್‌ಗಳನ್ನು ಬಿಡುಗಡೆ ಗೊಳಿಸಿತ್ತು. ಆದರೆ ಒಂದೊಂದು ವೆಬ್‌ಸೈಟ್‌ಗಳಲ್ಲಿ ಒಂದೊಂದು ತೆರನಾದ ಫಲಿತಾಂಶ ಪ್ರದರ್ಶನವಾಗುತ್ತಿದೆ. ಉದಾಹರಣೆಗೆ ಒಂದರಲ್ಲಿ ಒಂದು ತೆರನಾದ ಅಂಕಗಳಿದ್ದರೆ, ಮತ್ತೊಂದರಲ್ಲಿ ಮತ್ತೊಂದು ತೆರನಾದ ಅಂಕ ಪ್ರದರ್ಶನವಾಗುತ್ತಿದೆ. ಅಂತೆಯೇ ಒಂದರಲ್ಲಿ ಕಡಿಮೆ ಅಂಕ ತೋರುತ್ತಿದೆ ಎಂದು ಆತಂಕಕ್ಕೀಡಾಗಿರುವಾಗಲೇ ಮತ್ತೊಂದರಲ್ಲಿ ಪರೀಕ್ಷೆಗೆ ಗೈರು ಹಾಜರು ಎಂದು ತೋರಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆತಂಕಕ್ಕೀಡಾಗಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸರ್ಕಾರದ ಯಾವುದೇ ಅಧಿಕಾರಿಗಳು ಈ ಬಗ್ಗೆ ಸೂಕ್ತ ಪ್ರತಿಕ್ರಿಯೆ ನೀಡದೇ ತಮ್ಮ ಕುರುಡುತನ ಪ್ರದರ್ಶಿಸುತ್ತಿದ್ದಾರೆ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments