Select Your Language

Notifications

webdunia
webdunia
webdunia
webdunia

11 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ ಚಿಕ್ಕಪ್ಪ

11 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ ಚಿಕ್ಕಪ್ಪ
ಮಂಗಳೂರು , ಶನಿವಾರ, 20 ಸೆಪ್ಟಂಬರ್ 2014 (16:25 IST)
11 ವರ್ಷದ ಬಾಲಕಿಯೊಬ್ಬಳು ತನ್ನ ಸ್ವಂತ ಚಿಕ್ಕಪ್ಪನಿಂದಲೇ ಅತ್ಯಾಚಾರಕ್ಕೊಳಗಾದ ಘಟನೆ ಮಂಗಳೂರಿನ  ಅಜ್ಜಂಪಾಡಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 

ಸೆಪ್ಟಂಬರ್ 13 ರಂದು ಈ ಘಟನೆ ನಡೆದಿದ್ದು, ಪೀಡಿತ ಬಾಲಕಿ ಕಳೆದ ಒಂದು ವಾರದಿಂದ ಮಂಕಾಗಿರುವುದನ್ನು ನೋಡಿದ ಶಿಕ್ಷಕರು ವಿಚಾರಿಸಿದಾಗ ಬಾಲಕಿ ನಡೆದ ಕುಕೃತ್ಯವನ್ನು ಬಾಯ್ಬಿಟ್ಟಿದ್ದಾಳೆ. ಕಳೆದ 13 ರಂದು ತನ್ನ ಮೇಲೆ ಬಲಾತ್ಕಾರ ನಡೆಸಿದ ತನ್ನ ತಂದೆಯ ತಮ್ಮ ಜಗದೀಶ್ ವಿಷಯ ಬಾಯ್ಬಿಟ್ಟರೆ ಸಾಯಿಸುವುದಾಗಿ ಬೆದರಿಕೆ ಒಡ್ಡಿದ್ದ ಎಂದು ಆಕೆ ಹೇಳಿದ್ದಾಳೆ. 
 
ಬಜ್ಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ. 

Share this Story:

Follow Webdunia kannada