Select Your Language

Notifications

webdunia
webdunia
webdunia
webdunia

ಮೊಬೈಲ್‌ನಲ್ಲಿ ಅರೆ ನಗ್ನ ಚಿತ್ರಗಳನ್ನು ವೀಕ್ಷಿಸಿ ಸಿಕ್ಕಬಿದ್ದ ಸಚಿವ ತನ್ವೀರ್ ಸೇಠ್

ಮೊಬೈಲ್‌ನಲ್ಲಿ ಅರೆ ನಗ್ನ ಚಿತ್ರಗಳನ್ನು ವೀಕ್ಷಿಸಿ ಸಿಕ್ಕಬಿದ್ದ ಸಚಿವ ತನ್ವೀರ್ ಸೇಠ್
ಬೆಂಗಳೂರು , ಗುರುವಾರ, 10 ನವೆಂಬರ್ 2016 (16:21 IST)
ಟಿಪ್ಪು ಜಯಂತಿ ದಿನಾಚರಣೆ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ತನ್ವೀರ್ ಸೇಠ್ ಮೊಬೈಲ್‌ನಲ್ಲಿ ಅರೆ ನಗ್ನ ಚಿತ್ರಗಳನ್ನು ವೀಕ್ಷಿಸುತ್ತಿದ್ದ ಘಟನೆ ಬಹಿರಂಗವಾಗಿದೆ.
 
ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವ ತನ್ವೀರ್ ಸೇಠ್, ಟಿಪ್ಪು ಜಯಂತಿ ದಿನಾಚರಣೆಯ ದಿನದಂದು ಇಂತಹ ಕೃತ್ಯಕ್ಕೆ ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
 
ಸಚಿವ ತನ್ವೀರ್ ಸೇಠ್ ಘಟನೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಸಚಿವ ತನ್ವೀರ್ ಸೇಠ್ ರಾಜೀನಾಮೆಯನ್ನು ಪಡೆಯಬೇಕು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
 
ಬಿಜೆಪಿ ಸಚಿವರು ವಿಧಾನಸೌಧದಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ಪ್ರಕರಣ ಬಹಿರಂಗವಾದಾಗ ಬಿಜೆಪಿ ಸಚಿವರು ರಾಜೀನಾಮೆ ಪಡೆದಿದೆ. ಅದರಂತೆ, ಇಂದೇ ಸಿಎಂ ಸಿದ್ದರಾಮಯ್ಯ ತನ್ವೀರ್ ಸೇಠ್ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಮೂಟೆಗಟ್ಟಲು ನೋಟುಗಳಿಗೆ ಬೆಂಕಿ