Webdunia - Bharat's app for daily news and videos

Install App

ಸೇನೆಗೆ ಮೊದಲೇ ಫ್ರೀ ಹ್ಯಾಂಡ್ ಕೊಟ್ಟಿದ್ದರೆ ಇಷ್ಟೆಲ್ಲಾ ಆಗ್ತಾನೇ ಇರ್ಲಿಲ್ಲ: ರಾಮಲಿಂಗಾ ರೆಡ್ಡಿ

Krishnaveni K
ಬುಧವಾರ, 7 ಮೇ 2025 (14:58 IST)
ಬೆಂಗಳೂರು: ಸೇನೆಗೆ ಮೊದಲೇ ಫ್ರೀ ಹ್ಯಾಂಡ್ ಕೊಟ್ಟಿದ್ದರೆ ಇಷ್ಟೆಲ್ಲಾ ದಾಳಿ ಆಗ್ತಾನೇ ಇರ್ಲಿಲ್ಲ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
 

ಇಂದು ಆಪರೇಷನ್ ಸಿಂದೂರ ಹೆಸರಿನಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿದ ಬಗ್ಗೆ ಮಾಧ್ಯಮಗಳ ಮುಂದೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತೀಯ ಸೈನಿಕರ ಕಾರ್ಯಾಚರಣೆ ಬಗ್ಗೆ, ಕೆಲಸದ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ. ಈವತ್ತು ಅಂತಲ್ಲ, ಚೀನಾ ದಾಳಿ ಮಾಡಿದ್ದಾಗ, ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನ ಮಂತ್ರಿಯಾಗಿದ್ದಾಗ, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಬಹಳ ಒಳ್ಳೆಯ ಕೆಲಸ ಮಾಡಿ ದೇಶದ ಕೀರ್ತಿ ಹೆಚ್ಚಿಸಿದ್ದಾರೆ.

ಈಗಲೂ ಕೂಡಾ ಸರ್ಜಿಕಲ್ ಸ್ಟ್ರೈಕ್ ಮಾಡಿದ ಸಂದರ್ಭದಲ್ಲಿ ಬಹಳ ಹಿಂದೆನೇ ಸೇನೆಗೆ ಫ್ರೀ ಹ್ಯಾಂಡ್ ಕೊಡಬೇಕಿತ್ತು. ಆ ಸಂದರ್ಭದಲ್ಲೇ ಹೀಗೆ ಮಾಡಿದ್ರೆ ಇಂತಹ ದಾಳಿಗಳು ಆಗ್ತಿರಲಿಲ್ಲ. ಬಹಳ ಹಿಂದೆನೇ ಫ್ರೀ ಹ್ಯಾಂಡ್ ಕೊಟ್ಟಿದ್ದರೆ ಪುಲ್ವಾಮದಲ್ಲಿ ಸೈನಿಕರು ಸಾಯ್ತಿರಲಿಲ್ಲ, ಪಹಲ್ಗಾಮ್ ನಲ್ಲಿ ಪ್ರವಾಸಿಗರು ಸಾಯುತ್ತಿರಲಿಲ್ಲ.

ಈಗ ಸರ್ಕಾರ ಸೈನಿಕರಿಗೆ ಬೆಂಬಲ ಕೊಟ್ಟಿದೆ. ನಮ್ಮ ಕಾಂಗ್ರೆಸ್ ಪಕ್ಷವೂ ಸೈನಿಕರು, ಕೇಂದ್ರದ ಜೊತೆಗಿರುತ್ತದೆ ಎಂದು ಹೇಳಿದ್ದೇವೆ. ನಮ್ಮ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಹೇಳಿದ್ದಾರೆ’ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್ಥಿಕತೆಯಲ್ಲಿ 10 ವರ್ಷಗಳ ಹಿಂದೆ 10ನೇ ಸ್ಥಾನದಲ್ಲಿದ್ದ ಭಾರತ 5ನೇ ಸ್ಥಾನಕ್ಕೇರಿದೆ: ಮೋದಿ ಗುಣಗಾನ

ಮೇಕ್ ಇನ್ ಇಂಡಿಯ ತಾಕತ್ತಿನಲ್ಲಿ ಕನ್ನಡಿಗರ ಕೊಡುಗೆ ಅಪಾರ: ನರೇಂದ್ರ ಮೋದಿ

ದೆಹಲಿಯಲ್ಲಿ ಪ್ರತಾಪ್ ಸಿಂಹಗೆ ಬ್ಲೂ ಬಾಯ್‌ ಎನ್ನುತ್ತಾರೆ: ಎಂ ಲಕ್ಷ್ಮಣ್ ಹೊಸ ಬಾಂಬ್‌

ಮೇಘಸ್ಫೋಟವಾಗಿ ಹಲವರ ಬಲಿ ಪಡೆದ ಉತ್ತರಕಾಶಿಯಲ್ಲಿ ಈಗ ಹೇಗಿದೆ ಗೊತ್ತಾ ಪರಿಸ್ಥತಿ

ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿದ್ದ ಪಾಕ್‌ ಸರ್ಕಾರಕ್ಕೆ ಭಾರೀ ನಷ್ಟ

ಮುಂದಿನ ಸುದ್ದಿ
Show comments