ಬೆಂಗಳೂರು: ಗಂಗಾ ನದಿ ಕಲುಷಿತವಾಗಿದೆ ಎಂದು ಕೇಂದ್ರದ ಸಂಸ್ಥೆಗಳೇ ವರದಿ ಕೊಟ್ಟಿದೆ. ಆದರೂ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಅವರದೇ ಕೇಂದ್ರ ಸಂಸ್ಥೆಗಳೇ ಗಂಗಾ ನದಿ ನೀರು ಸ್ನಾನಕ್ಕೂ ಯೋಗ್ಯವಲ್ಲ ಎಂದು ಹೇಳಿರುವಾಗ ಕೆಲವು ಖಾಸಗಿ ಸಂಸ್ಥೆಗಳು ಲಾಭ ಮಾಡಿಕೊಳ್ಳಲು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕುಂಭಮೇಳಕ್ಕೆ 54 ಕೋಟಿ ಜನ ಬಂದು ಸ್ನಾನ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಸಂತೋಷ, ಆದರೆ ಅದರ ಪರಿಣಾಮ ಏನು ಆಗಿದೆ ಎನ್ನುವುದು ತಿಳಿಯಬೇಕು ಅಲ್ವಾ? ಎಷ್ಟೋ ಜನ ಕುಂಭಮೇಳಕ್ಕೆ ಹೋಗಿ ಬಂದವರಿಗೆ ಕಲುಷಿತ ನೀರಿನಿಂದ ಸಮಸ್ಯೆಯಾಗುತ್ತಿದೆ ಎಂದರೂ ಜನರ ದಿಕ್ಕು ತಪ್ಪಿಸಿ ರಾಜಕೀಯ ಬೇಳೆ ಬೇಯಿಸಲು ವ್ಯಾಪಾರ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಯಾವುದೇ ನದಿಗಳು ಕಲುಷಿತವಾದರೆ ಅದರ ನಷ್ಟ ಯಾರಿಗೆ ಹೇಳಿ? ಹೀಗಾಗಿ ಪ್ರಯಾಗ್ ರಾಜ್ ನ ಕುಂಭಮೇಳ ಇರಬಹುದು, ನಮ್ಮ ನದಿಗಳೇ ಇರಬಹುದು. ಅದನ್ನು ಕಾಪಾಡಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ ಎಂದಷ್ಟೇ ನನ್ನ ಉದ್ದೇಶ ಎಂದಿದ್ದಾರೆ.