Webdunia - Bharat's app for daily news and videos

Install App

ಮಧ್ಯ ವಯಸ್ಕರು, ಅವಿವಾಹಿತರು ಹಾಗು ವಿಧುರರು ವ್ಯಕ್ತಿಗಳನ್ನೇ ಟಾರ್ಗೆಟ್

Webdunia
ಗುರುವಾರ, 4 ನವೆಂಬರ್ 2021 (21:49 IST)
ಬೆಂಗಳೂರು: ಮಧ್ಯ ವಯಸ್ಕರು, ಅವಿವಾಹಿತರು ಹಾಗು ವಿಧುರರು ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಮಾಡುತ್ತಿದ್ದ ತಂಡದ ಕಿಂಗ್ ಪಿನ್ ಒಬ್ಬನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಬಂಧಿತ ಆರೋಪಿ.
ಆರೋಪಿಗಳು ಮೊದಲಿಗೆ ಮಿಸ್ಡ್ ಕಾಲ್ ಕೊಟ್ಟು ನಂತರ ವಾಟ್ಸ್ ಆ್ಯಪ್​​​ನಲ್ಲಿ ಮೆಸೇಜ್​​ ಮಾಡುತ್ತಿದ್ದರು. ವಾಟ್ಸ್​ ಆಪ್ ನಲ್ಲಿ ಪ್ರತಿಕ್ರಿಯಿಸಿದರೆ ಬಳಿಕ ಮತ್ತೆ ಕರೆ ಮಾಡಿ ಖೆಡ್ಡಾಕ್ಕೆ ಬೀಳಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.
ಮಾರತ್ತಹಳ್ಳಿ ನಿವಾಸಿಯಾಗಿರುವ 50 ವರ್ಷ ವಯಸ್ಸಿನ ವ್ಯಕ್ತಿಗೆ ವಾಟ್ಸ್​​​ ಆ್ಯಪ್​ನಲ್ಲಿ ಯುವತಿಯ ಹೆಸರಿನಲ್ಲಿ ಮೆಸೇಜ್ ಮಾಡುತ್ತಿದ್ದರು. ನಗರದಲ್ಲೇ ಕುಳಿತು ತಾವು ಉತ್ತರ ಭಾರತ ಮೂಲದವರು ಎಂದು ಹೇಳಿ ಬೆಂಗಳೂರಿಗೆ ಬಂದಾಗ ಭೇಟಿಯಾಗುವುದಾಗಿ ಸ್ನೇಹ ಬೆಳೆಸುತ್ತಿದ್ದರು. ಕಳೆದ ಅ.10 ರಂದು ವ್ಯಕ್ತಿಗೆ ನಗರಕ್ಕೆ ಬಂದಿರುವುದಾಗಿ ಆರೋಪಿಗಳು ತಿಳಿಸಿದ್ದರು. ಯುವತಿಯೊಬ್ಬಳಿಂದ ಕರೆ ಮಾಡಿಸಿ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಹಾಗಾಗಿ ದೂರುದಾರ ವ್ಯಕ್ತಿ ಯುವತಿಯನ್ನು ಭೇಟಿ ಮಾಡಲು ರಾತ್ರಿಯ ವೇಳೆ ನಗರದ ವೀರಣ್ಣಪಾಳ್ಯದ ಹೋಟೆಲ್ ಬಳಿ ಬಂದಿದ್ದರು.
ನಂತರ ಹೋಟೆಲ್ ಒಳಗೆ ತೆರಳುತ್ತಿದ್ದಂತೆ ಯುವತಿ ಸಲುಗೆಯಿಂದ ಮಾತನಾಡಲು ಆರಂಭಿಸಿದ್ದಳು. ಈ ವೇಳೆ ಹೋಟೆಲ್ ರೂಂಗೆ ಪೊಲೀಸರ ಹೆಸರಿನಲ್ಲಿ ಎಂಟ್ರಿ ಕೊಟ್ಟ ಆರೋಪಿಗಳು ನೀನು ಡ್ರಗ್ಸ್​​ ಮಾರುತ್ತಿದ್ದೀಯಾ ಎಂಬ ಮಾಹಿತಿ ಇದೆ ಎಂದು ಅವಾಜ್ ಹಾಕಿದ್ದಾರೆ. ಬಳಿಕ ವ್ಯಕ್ತಿಯ ಮೊಬೈಲ್ ಕಸಿದುಕೊಂಡು ಫೋನ್​​ ಪೇ, ಗೂಗಲ್ ಪೇನಲ್ಲಿ ಆತ ಅಟ್ಯಾಚ್ ಮಾಡಿದ್ದ ಅಕೌಂಟ್ ಗಳನ್ನು ಚೆಕ್ ಮಾಡಿ ವ್ಯಕ್ತಿಯ 3 ಅಕೌಂಟ್​​​ಗಳಿಂದ 5 ಲಕ್ಷದ 91 ಸಾವಿರ ರೂ. ವರ್ಗಾಯಿಸಿಕೊಂಡಿದ್ದರು. ನಂತರ ಹೋಟೆಲ್ ರೂಂನಲ್ಲಿ ಕೂಡಿ ಹಾಕಿ ಪರಾರಿ ಆಗಿದ್ದರು.
ಓರ್ವ ಯುವತಿ ಸೇರಿ ಮೂವರು ಆರೋಪಿಗಳಿಂದ ಕೃತ್ಯ ನಡೆದಿದೆ ಎಂದು ಮಾರತ್ತಹಳ್ಳಿಯ ಪ್ರತಿಷ್ಠಿತ ಬ್ಯಾಂಕ್​​ನಲ್ಲಿ ಉದ್ಯೋಗಿಯಾಗಿರುವ ವ್ಯಕ್ತಿ ಗೋವಿಂದಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
 
20ಕ್ಕೂ ಹೆಚ್ಚು ಜನರಿಗೆ ಹನಿಟ್ರ್ಯಾಪ್:
ಓರ್ವ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿರುವ ಪೊಲೀಸರು ಬೆಂಗಳೂರು ನಗರವೊಂದರಲ್ಲೇ ಸುಮಾರು 20ಕ್ಕೂ ಹೆಚ್ಚು ಜನರಿಗೆ ಈ ರೀತಿಯಲ್ಲೇ ಹನಿಟ್ರ್ಯಾಪ್ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ. ಸದ್ಯ ಪರಾರಿಯಾಗಿರುವ ಓರ್ವ ಯುವತಿ ಹಾಗು ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಗೋವಿಂದಪುರ ಪೊಲೀಸ್ ಠಾಣೆಯ ಸಿಬ್ಬಂದಿ ಬಲೆ ಬೀಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಒಂದೇ ಮಳೆಗೆ ಶುರುವಾಯ್ತು ಮಂಗಳೂರು, ಬೆಂಗಳೂರು ಪ್ರಯಾಣಿಕರಿಗೆ ಸಂಕಷ್ಟ: ಶಿರಾಡಿ ಘಾಟಿ ಏನಾಗಿದೆ

Karnataka Rains: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಅಡಿಕೆ ಬೆಳೆಗಾರರಿಗೆ ಶುರುವಾಯ್ತು ಆತಂಕ

Karnataka Weather: ಇನ್ನು ಎರಡು ದಿನ ಮಳೆ ಜೊತೆಗೆ ರಾಜ್ಯದ ಜನರು ಈ ಎಚ್ಚರಿಕೆ ಗಮನಿಸಿ

Karnataka Weather: ಈ ವಾರ ಪೂರ್ತಿ ಹವಾಮಾನ ಹೇಗಿರಲಿದೆ ಗೊತ್ತಾ

Dehli Airport: ಭಾರೀ ಮಳೆಗೆ ಸೋರುತ್ತಿದೆ ಛಾವಣಿ, Video Viral

ಮುಂದಿನ ಸುದ್ದಿ
Show comments