ಬೆಂಗಳೂರು : ಮೇಕೆದಾಟು ಆಣೆಕಟ್ಟು ಯೋಜನೆ ಕಾಮಗಾರಿಗೆ ಒತ್ತಾಯಿಸಿ ನೀರಿಗಾಗಿ ನಡಿಗೆ ಹೆಸರಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಎರಡನೇ ಹಂತದ ಪಾದಯಾತ್ರೆಗೆ ಇಂದು 2ನೇ ದಿನ.
ಇಂದು ಬೆಳಗ್ಗೆ ಬಿಡದಿಯಿಂದ ಪಾದಯಾತ್ರೆ ಶುರುವಾಗಲಿದೆ. ನಿನ್ನೆಯಷ್ಟೇ ಕನಕಪುರ ಸರ್ಕಲ್ನಲ್ಲಿ ನಗಾರಿ ಬಾರಿಸುವ ಮೂಲಕ ಪಾದಯಾತ್ರೆಗೆ ಉಸ್ತುವಾರಿ ಸುರ್ಜೆವಾಲಾ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತಿತರ ಮುಖಂಡರು ಚಾಲನೆ ನೀಡಿದ್ರು. ನಟ ನೆನಪಿರಲಿ ಪ್ರೇಮ್, ಸಾಧುಕೋಕಿಲಾ ಕೂಡ ಪಾಲ್ಗೊಂಡಿದ್ರು.
ಪಾದಯಾತ್ರೆಗೆ ಅನುಮತಿ ಪಡೆಯದ ಕಾಂಗ್ರೆಸ್ಗೆ ಇಂತದೊಂದು ಆತಂಕ ಎದುರಾಗಿದೆ. ಕೇವಲ ಪಾದಯಾತ್ರೆ ಬಗ್ಗೆ ಮಾಹಿತಿ ನೀಡಿರುವ ಕಾಂಗ್ರೆಸ್ ನಾಯಕರಿಗೆ ಈ ಬಾರಿಯು ಕೊನೆಗಳಿಗೆಯ ತೊಡಕಿನ ಆತಂಕ ಎದುರಾಗಿದೆ ಎನ್ನಲಾಗುತ್ತಿದೆ.
ಒಟ್ಟಾರೆ ಬೆಂಗಳೂರು ಮಹಾನಗರದ ಒಳಗೆ ಪಾದಯಾತ್ರೆ ನಡೆಸಲು ಮುಂದಾದ ಕೈ ನಾಯಕರುಗಳಿಗೆ ಇನ್ಯಾವುದೋ ರೀತಿಯ ಅಡ್ಡಿ ಆತಂಕ ಎದುರಾಗಬಹುದು ಎಂಬ ಆತಂಕ ಎದುರಾಗಿದೆ ಎನ್ನಲಾಗುತ್ತಿದೆ