ಮಳೆಯಿಲ್ಲದೆ ರಾಜ್ಯ ತೀವ್ರ ಬರಗಾಲ ಪರಿಸ್ಥಿತಿ ಎದುರಿಸುತ್ತಿದೆ. ಬೆಳೆಗಳಿಗೆ ನೀರಿಲ್ಲದೆ ರೈತರು ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ. ಅತರ್ಜಲ ಕುಸಿದಿದೆ ಎಂದು ಮಂಡ್ಯ ತಾಲೂಕಿನ ಹೆಮ್ಮನಹಳ್ಳಿಗೆ ಭೇಟಿ ನೀಡದ ಕೇಂದ್ರದ ಝಾ ನೇತೃತ್ವದ ಜಲ ತಾಂತ್ರಿಕ ಸಮಿತಿಯ ಮುಂದೆ ರೈತರು ಅಳಲು ತೋಡಿಕೊಂಡಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಸ್ಥಿತಿ ಅಧ್ಯಯನ ಮಾಡಲು ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಿಗೆ ಆಗಮಿಸಿದ ತಾಂತ್ರಿಕ ತಂಡದ ಅಧಿಕಾರಿಗಳ ಎದುರು ರೈತರು ತಮ್ಮ ಪರಿಸ್ಥಿತಿಯನ್ನು ವಿವರಿಸಿದರು.
ಗದ್ದೆಗಳು ಒಣಗಿವೆ. ಬೆಳೆಗಳಿಗೆ ನೀರು ಬಿಡುತ್ತಿಲ್ಲ. ನೀರಾವರಿ ಪ್ರದೇಶವಾದರೂ ನೀರು ಇಲ್ಲದೆ ಪರಿಸ್ಥಿತಿ ನಿರ್ಮಾಣವಾಗಿದೆ. ಸಾವಿರ ಅಡಿ ಬೋರ್ ಕೊರೆದರು ನೀರು ಬರುತ್ತಿಲ್ಲ. ನಿಗದಿಯಂತೆ ರಾಜ್ಯದಲ್ಲಿ ಮಳೆಯಾಗುತ್ತಿಲ್ಲ ಎಂದು ಅಧಿಕಾರಿಗಳ ಎದುರು ಅಧಿಕಾರಿಗಳ ಮುಂದೆ ಸಂಕಷ್ಟ ವಿವರಿಸಿದರು.
ಸುಪ್ರೀಂಕೋರ್ಟ್ ಸೂಚನೆಯಂತೆ ಉಭಯ ರಾಜ್ಯಗಳಲ್ಲಿನ ನೀರನ ಲಭ್ಯತೆ ಕುರಿತು ಪರಿಶೀಲನೆ ನಡೆಸಲು ಕೇಂದ್ರದ ತಂಡ ಕಾವೇರಿ ಜಲಾನಯನ ಪ್ರದೇಶಕ್ಕೆ ಆಗಮಿಸಿದ್ದು, ರಾಜ್ಯಗಳಲ್ಲಿರುವ ನೀರಿನ ಲಭ್ಯತೆ ಹಾಗೂ ವಸ್ತುಸ್ಥಿತಿ ಕುರಿತು ಅಧ್ಯಯನ ನಡೆಸುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ