ಸತ್ತ ವ್ಯಕ್ತಿ ಎದ್ದು ಕೂತ; ದಿಕ್ಕಾಪಾಲಾಗಿ ಓಡಿದ ಜನರು

Webdunia
ಗುರುವಾರ, 23 ಫೆಬ್ರವರಿ 2017 (12:23 IST)
ಶವಸಂಸ್ಕಾರಕ್ಕೆ ತಯಾರಿ ನಡೆಸುತ್ತಿದ್ದಾಗ ಸತ್ತವ್ಯಕ್ತಿ ಎದ್ದು ಕುಳಿತ ಪವಾಡಸದೃಶ ಘಟನೆ ಯಾದಗಿರಿ ಜಿಲ್ಲೆಯ ಸುರಪುರದ ಮದನಿಂಗನಾಳ ಗ್ರಾಮದಲ್ಲಿ ನಡೆದಿದೆ.
 
ಈ  ಪವಾಡಸದೃಶ ಘಟನೆಗೆ ಸಾಕ್ಷಿಯಾದ ವ್ಯಕ್ತಿಯ ಹೆಸರು ನಿಂಗಪ್ಪ( 54) . 
 
ಕಳೆದ ಫೆಬ್ರವರಿ 16 ರಂದು ನಿಂಗಪ್ಪನಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ವಿಜಯಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ತುರ್ತು ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕು ಎಂದಿದ್ದ ವೈದ್ಯರು ಎರಡು ದಿನ ತೀವ್ರ ನಿಗಾ ಘಟಕದಲ್ಲಿಟ್ಟಿದ್ದರು. ಆದರೆ ಆಗ ಕೋಮಾ ಸ್ಥಿತಿಗೆ ತಲುಪಿದ್ದ ನಿಂಗಪ್ಪ ಸುಧಾರಿಸಿಕೊಳ್ಳುವ ಲಕ್ಷಣವನ್ನು ತೋರಲಿಲ್ಲ. ಹೀಗಾಗಿ ವೈದ್ಯರು ಒಂದು ಗಂಟೆ ಬದುಕುವುದು ಜಾಸ್ತಿ. ಮನೆಗೊಯ್ಯಿರಿ ಎಂದಿದ್ದಾರೆ. ಅಂಬುಲೆನ್ಸ್‌ನಲ್ಲಿ ಅವರನ್ನು ಮನೆಗೊಯ್ಯುವಾಗ ಮಾರ್ಗ ಮಧ್ಯದಲ್ಲಿ ಅವರ ಉಸಿರಾಟ ನಿಂತಿದ್ದು, ಅಂಬುಲೆನ್ಸ್ ಸಿಬ್ಬಂದಿ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ.
 
ಫೆಬ್ರವರಿ 19 ರಂದು ಮನೆ ಮುಂದೆ ಅವರ ದೇಹವನ್ನಿಟ್ಟುಕೊಂಡು ಸಂಪೂರ್ಣ ರಾತ್ರಿ ಭಜನೆಯನ್ನು ನಡೆಸಲಾಗಿದೆ. ರಾತ್ರಿ ಎಲ್ಲ ಮಿಸುಕಾಡದ ನಿಂಗಪ್ಪ ಫೆಬ್ರವರಿ 20 ರ ಬೆಳಗಿನ ಜಾವ 4ಗಂಟೆ ಸುಮಾರಿಗೆ ಏಕಾಏಕಿ ಎದ್ದು ಕುಳಿತಿದ್ದಾರೆ. ಇದರಿಂದ ಬೆದರಿದ ಜನರು ಎದ್ನೋ ಬಿದ್ನೋ ಎಂದು ಅಲ್ಲಿಂದ ಓಟಕ್ಕಿತ್ತಿದ್ದಾರೆ.
 
ಮತ್ತೀಗ ನಿಂಗಪ್ಪ ಆರಾಮಾಗಿ ಓಡಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅನ್ನದಾತರ ಜೊತೆ ಜನ್ಮದಿನ ಯಾವತ್ತೂ ಮರೆಯಲಾರೆ: ವಿಜಯೇಂದ್ರ

ತಮ್ಮ ಪಕ್ಷದಲ್ಲೇ ಬೇರೆಯವರಿಗೆ ಅವಕಾಶ ಕೊಡದ ಗಾಂಧಿ ಕುಟುಂಬದವರು ಸೇನೆ ಬಗ್ಗೆ ಮಾತನಾಡ್ತಾರೆ: ಬಿಜೆಪಿ ವ್ಯಂಗ್ಯ

ಕರ್ನಾಟಕ ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ ನೋಡಿ

ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ: ಕೇಂದ್ರ ಜಿಎಸ್ ಟಿ ಇಳಿಸಿದ್ದರೆ ನಂದಿನಿ ತುಪ್ಪದ ಬೆಲೆ ಏರಿಸಿದ ಕೆಎಂಎಫ್

ಬ್ರೆಜಿಲ್ ಮಾಡೆಲ್ ಹರ್ಯಾಣದಲ್ಲಿ 22 ಬಾರಿ ವೋಟ್: ರಾಹುಲ್ ಗಾಂಧಿಯಿಂದ ಮತ್ತೊಂದು ಬಾಂಬ್

ಮುಂದಿನ ಸುದ್ದಿ
Show comments