Webdunia - Bharat's app for daily news and videos

Install App

ಸಹೋದರಿಯ ಗೆಳತಿಯನ್ನೇ ರೇಪ್ ಮಾಡಿದ ಕಾಮುಕ ಸಹೋದರ

Webdunia
ಶನಿವಾರ, 5 ಆಗಸ್ಟ್ 2017 (16:56 IST)
19 ವರ್ಷದ ಅಂಗವಿಕಲ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.
 
ಹೂಡಿ ಪ್ರದೇಶದ ಬಳಿಯಿರುವ ಬಸವಣ್ಣ ನಗರ ನಿವಾಸಿ, ದಿನಗೂಲಿ ಕಾರ್ಮಿಕನಾಗಿರುವ ಕಾಮುಕ ರವಿ, ಸಹೋದರಿಯ ಗೆಳತಿ ಮನೆಗೆ ಬಂದಾಗ ಆಕೆಯ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿದ್ದಾನೆ.
 
ಅತ್ಯಾಚಾರಕ್ಕೊಳಗಾದ ಯುವತಿಯ ತಾಯಿಯ ಪ್ರಕಾರ,  ಪುತ್ರಿ ತನ್ನ ಗೆಳತಿಯನ್ನು ನೋಡಲು ರವಿ ಮನೆಗೆ ಹೋಗಿದ್ದಳು. ಆದರೆ, ಮನೆಯಲ್ಲಿ ಆಕೆಯಿರಲಿಲ್ಲ. ಸಹೋದರ ರವಿ ಉಪಸ್ಥಿತನಿದ್ದನು. ಮನೆಯಲ್ಲಿ ಯಾರು ಇಲ್ಲದಿರುವುದು ಕಂಡು ಪುತ್ರಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ತುಂಬಾ ಹೊತ್ತಾದರು ಪುತ್ರಿ ಬಾರದಿದ್ದರಿಂದ ನಾನೇ ರವಿಯ ಮನೆಗೆ ಹೋಗಿ ನೋಡಿದಾಗ ಪುತ್ರಿಯ ಮೇಲೆ ಅತ್ಯಾಚಾರವಾಗಿರುವುದು ಕಂಡು ಬಂದಿದೆ.  
 
ಯುವತಿಯ ಪೋಷಕರು ಆರೋಪಿ ರವಿಯ ವಿರುದ್ಧ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ರವಿ, ತನ್ನ ಸಹೋದರಿ ಮತ್ತು ತಂದೆಯೊಂದಿಗೆ ಕೋಲಾರ ಜಿಲ್ಲೆಗೆ ಪರಾರಿಯಾಗಿದ್ದಾನೆ.
 
ಮಾರನೇ ದಿನ ನಗರಕ್ಕೆ ಆಗಮಿಸುತ್ತಿದ್ದಂತೆ ಆತನ ವಿರುದ್ಧ ಅಪಹರಣ, ಅತ್ಯಾಚಾರ ಸೇರಿದಂತೆ ಕೆಲ ಪ್ರಕರಣಗಳನ್ನು ದಾಖಲಿಸಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ್ ಜೈನ್‌ಗಿತ್ತು ಇನ್ನಷ್ಟು ದಂಧೆಗಳು

ಏರ್‌ ಇಂಡಿಯಾ ದುರಂತ: ಮೃತದೇಹ ಅದಲು, ಬದಲು, ಬ್ರಿಟನ್ ಕುಟುಂಬದ ಆರೋಪ

ಕರ್ನಾಟಕದಲ್ಲಿ ಜಾತಿಗಣತಿಗೆ ಡೇಟ್ ಫಿಕ್ಸ್

ಆಪರೇಷನ್ ಸಿಂಧೂರದಲ್ಲಿ ಗಾಯಗೊಂಡಿದ್ದ ಮುಂಬೈ ದಾಳಿಯ ಮಾಸ್ಟರ ಮೈಂಡ್ ಉಗ್ರ ಅಜೀಜ್ ಸಾವು

ಧರ್ಮಸ್ಥಳ ಕೇಸ್ ತನಿಖೆಗೆ ಮಾಸ್ಟರ್ ಪ್ಲ್ಯಾನ್ ಮಾಡಿದ ಎಸ್ಐಟಿ

ಮುಂದಿನ ಸುದ್ದಿ
Show comments