Webdunia - Bharat's app for daily news and videos

Install App

ಪತ್ನಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ಹೇಡಿ ಪತಿಯ ಬಂಧನ

Webdunia
ಶನಿವಾರ, 27 ಜೂನ್ 2015 (16:01 IST)
ಪತ್ನಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದ ಹೇಡಿ ಪತಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.
 
ಸುಬ್ರಮಣ್ಯಪುರದ ಗಣಪತಿಪುರಂ ಬಡಾವಣೆಯ ಮನೆಯೊಂದರ ಮೇಲೆ ದಾಳಿ ಮಾಡಿದ್ದ ಪೊಲೀಸರು ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಏಳು ಮಂದಿ ಆರೋಪಿಗಳಲ್ಲಿ ಪತ್ನಿಯನ್ನು ವೇಶ್ಯಾಟಿಕೆಗೆ ತಳ್ಳಿದ ಆರೋಪಿ ಕೂಡಾ ಒಬ್ಬನಾಗಿದ್ದಾನೆ ಎನ್ನಲಾಗಿದೆ.   
 
35 ವರ್ಷ ವಯಸ್ಸಿನ ಆರೋಪಿ ನರಸಿಂಹ ತನ್ನ ಪತ್ನಿ ಕುಸುಮಾಳನ್ನು ಪಿಂಪ್ ಕೃಷ್ಣಾ ಮತ್ತು ಐವರು ಗ್ರಾಹಕರಿಗೆ ಮಾರಾಟ ಮಾಡಿದ್ದ. ಮಹಿಳೆಯನ್ನು ರಕ್ಷಿಸಿದ ಪೊಲೀಸರು, ಒಂಬತ್ತು ಮೊಬೈಲ್ ಫೋನ್ ಮತ್ತು 1100 ರೂಪಾಯಿಗಳ ನಗದು ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ.  
 
ಆರೋಪಿ ನರಸಿಂಹ 24 ವರ್ಷ ವಯಸ್ಸಿನ ಕುಸುಮಾಳನ್ನು ಮನೆಗೆಲಸ ಮಾಡುವ ನೆಪದಲ್ಲಿ 30 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ್ದ. ನಂತರ ಆಕೆಯನ್ನು ಖರೀದಿಸಿದ ಕೃಷ್ಣ ಅಪರಿಚಿತರೊಂದಿಗೆ ಮಲಗುವಂತೆ ಒತ್ತಾಯಿಸತೊಡಗಿದ. ಒಪ್ಪದಿದ್ದಾಗ ಕಿರುಕುಳ ನೀಡಲು ಆರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 
 
ಕುಸುಮಾ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಪ್ರಕಾರ, ಆರೋಪಿ ಕೃಷ್ಣ ಪ್ರತಿನಿತ್ಯ 20 ಗ್ರಾಹಕರನ್ನು ಕರೆದುಕೊಂಡು ಮನೆಗೆ ಬರುತ್ತಿದ್ದ. ಅವರನ್ನು ತೃಪ್ತಿಪಡಿಸುವಂತೆ ಒತ್ತಾಯಿಸುತ್ತಿದ್ದ. ನನ್ನ ಆರೋಗ್ಯ ಹದಗೆಡುತ್ತಿರುವುದು ಕಂಡಿದ್ದರೂ ಚಿಕಿತ್ಸೆ ಕೊಡಿಸಲಿಲ್ಲ. ಕೇವಲ  ಗ್ರಾಹಕರನ್ನು ತೃಪ್ತಿಪಡಿಸುವುದೇ ನನ್ನ ಕೆಲಸವಾಗಿತ್ತು. ಇಲ್ಲವಾದಲ್ಲಿ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದರು ಎಂದು ತಿಳಿಸಿದ್ದಾಳೆ. 
 
ಕುಸುಮಾ ದೇಹದ ರುಚಿ ನೋಡಲು ಬಂದಿದ್ದ ಗ್ರಾಹಕನೊಬ್ಬ ಆಕೆಯ ಕಷ್ಟ ನೋಡಲಾರದೆ ಎನ್‌ಜಿಓ ಸಂಸ್ಥೆಗೆ ಮಾಹಿತಿ ನೀಡಿದ್ದಾನೆ 
 
ಎನ್‌ಜಿಓ ಅಧಿಕಾರಿಗಳು ಆಕೆಯ ಆರೋಗ್ಯ ತಪಾಸಣೆಯ ನೆಪವೊಡ್ಡಿ ಆಕೆಯ ಮನೆಗೆ ತೆರಳಿ ವಿಚಾರಣೆ ನಡೆಸಿದಾಗ ಆಕೆಗೆ ಮಹಾ ಹೆಮ್ಮಾರಿ ರೋಗವಿರುವುದು ಪತ್ತೆಯಾಗಿದೆ.
 
ಆಕೆಯ ಬಳಿ ಬಂದ ಗ್ರಾಹಕರು ಕೂಡಾ ಮಹಾ ಹೆಮ್ಮಾರಿ ರೋಗಕ್ಕೆ ಬಲಿಯಾಗಿರಬಹುದು ಎಂದು ಶಂಕಿಸಲಾಗಿದೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments