ಯುವತಿಯರನ್ನು ಕೆಣಕುವವರಿಗೆ ಹಣಿಯಲು ಪೊಲೀಸ್ ಇಲಾಖೆ ಭರ್ಜರಿ ಪ್ಲ್ಯಾನ್

Webdunia
ಶನಿವಾರ, 28 ಅಕ್ಟೋಬರ್ 2017 (15:20 IST)
ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪಿಗಳನ್ನು ಬಂಧಿಸಲು ಮಫ್ತಿಯಲ್ಲಿದ್ದ ಮಹಿಳಾ ಪೊಲೀಸ್ ಪೇದೆ ಲೈಂಗಿಕ ಕಿರುಕುಳಕ್ಕೆ ಗುರಿಯಾದ ಘಟನೆ ವರದಿಯಾಗಿದೆ.
ಫ್ರೆಜರ್ ಟೌನ್‌ಬಳಿಯಿರುವ ಕೋಲೆಸ್ ಪಾರ್ಕ್‌ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎನ್ನುವ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹಿಡಿಯಲು ಪಾರ್ಕ್‌ನಲ್ಲಿ ಮಹಿಳಾ ಪೊಲೀಸ್ ಪೇದೆಗಳನ್ನು ಮುಫ್ತಿಯಲ್ಲಿ ಹಾಕಲಾಗಿತ್ತು.ಆದರೆ, ಆರೋಪಿ ಹಯಾಜ್ ಪಾಶಾ, ಮಹಿಳಾ ಪೊಲೀಸ್ ಎನ್ನುವುದು ಅರಿಯದೆ ಅವರಿಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ನಂತರ ಮಹಿಳಾ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
 
ಮಹಿಳಾ ಪೊಲೀಸ್ ಪೇದೆ ಲಕ್ಷ್ಮಿಬಾಯಿ ವಾಗ್ಪೋಡಿ ಮತ್ತು ಹೋಮ್‌ಗಾರ್ಡ್ ಪುಷ್ಪಾ ಎನ್ನುವವರು ನಿನ್ನೆ ಸಂಜೆ 5.30ಕ್ಕೆ ಪಾರ್ಕ್‌ಗೆ ತೆರಳಿದ್ದಾರೆ. ಅಲ್ಲಿದ್ದ ಆರೋಪಿ ಪಾಶಾ ಇಬ್ಬರಿಗೆ ಅಸಭ್ಯ ಸಂಕೇತಗಳನ್ನು ತೋರಿಸಿದ್ದಾನೆ. ಕೆಲ ಹೊತ್ತಿನ ನಂತರ ಆರೋಪಿ ಪಾಶಾ ಇತರ ಮಹಿಳೆಯರಿಗೂ ಅದೇ ರೀತಿ ಅಸಭ್ಯ ವರ್ತನೆ ತೋರಿದ್ದಾನೆ. ಕೂಡಲೇ ಮಹಿಳಾ ಪೊಲೀಸ್ ಪೇದೆ ಲಕ್ಷ್ಮಿಬಾಯಿ ಹೊಯ್ಸಳಗೆ ಕರೆ ಮಾಡಿ ಕರೆಸಿದ ನಂತರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಆರೋಪಿ ಪಾಶಾ ವೃತ್ತಿಯಲ್ಲಿ ಪೇಂಟರ್‌ ಆಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಈ ವಾರ ಹವಾಮಾನದಲ್ಲಿ ಮಹತ್ವದ ಬದಲಾವಣೆ ತಪ್ಪದೇ ಗಮನಿಸಿ

ಛತ್ತೀಸ್‌ಗಢ್: ಅಮಿತ್ ಶಾ ಗುಡುಗಿದ ಬೆನ್ನಲ್ಲೇ ಊಹೆಗೂ ಮೀರಿದ ನಕ್ಸಲರು ಶರಣು

ಜಾರ್ಖಂಡ್: ಥಲಸ್ಸೆಮಿಯಾದಿಂದ ಬಳಲುತ್ತಿದ್ದ 5 ಮಕ್ಕಳಿಗೆ ರಕ್ತ ನೀಡಿದ ಬಳಿಕ ಎಚ್‌ಐವಿ ಪಾಸಿಟಿವ್‌

ಚೀನಾ, ಭಾರತ ನಡುವೆ ನೇರ ವಿಮಾನ ಹಾರಾಟ ಶುರು

ಕರ್ನೂಲ್ ಬಸ್ ದುರಂತ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್‌

ಮುಂದಿನ ಸುದ್ದಿ